Select Your Language

Notifications

webdunia
webdunia
webdunia
webdunia

ರೈತರಿಗೆ ಯಾಮಾರಿಸಿದರೆ ಹುಷಾರ್

ರೈತರಿಗೆ ಯಾಮಾರಿಸಿದರೆ ಹುಷಾರ್
ಉತ್ತರಕನ್ನಡ , ಶನಿವಾರ, 20 ಜೂನ್ 2020 (17:25 IST)
ನಕಲಿ ರಸಗೊಬ್ಬರ ಅಥವಾ ನಕಲಿ ಸಾವಯವ ಗೊಬ್ಬರದ ಕಾಟ ವಿಪರೀತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಅಥವಾ ನಕಲಿ ಸಾವಯವ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಹೀಗಂತ ಉತ್ತರಕನ್ನಡ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ನಕಲಿ ರಸಗೊಬ್ಬರವನ್ನು ವಾಹನಗಳಲ್ಲಿ ತುಂಬಿಕೊಂಡು ಹಳ್ಳಿಗಳಿಗೆ ತಂದು ಮಾರಾಟ ಮಾಡುತ್ತಿದ್ದಾರೆ.

ಕೆಲವು ಅಂಗಡಿಗಳಲ್ಲಿ ಮಾರುತ್ತಿದ್ದರೆ ಕೂಡಲೇ ರೈತರು ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು. ರೈತರು ಅಂಗಡಿಗಳಿಂದ ರಸಗೊಬ್ಬರವನ್ನು ಖರೀದಿಸುವಾಗ ಪರಿಶೀಲಿಸಿ ಖರೀದಿ ಮಾಡಬೇಕು. ನಕಲಿ ರಸಗೊಬ್ಬರ ಖರೀದಿಸಿ ಮೋಸ ಹೋಗಬಾರದು ಎಂದು ಎಚ್ಚರಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ : 9 ಜನರ ಮೇಲೆ ಕೇಸ್