ಪತ್ನಿ ಇದ್ದರೂ ಬೇರೆಯವಳ ಜೊತೆ ಮಲಗುತ್ತಿದ್ದ ಗಂಡ ತನ್ನ ಪತ್ನಿಗೆ ಹೊಲದಲ್ಲಿ ಮಾಡಬಾರದ ಕೆಲಸ ಮಾಡಿದ್ದಾನೆ.
ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹೊಲದಲ್ಲಿ ಕೊಲೆ ಮಾಡಿ ಹಾವು ಕಚ್ಚಿದೆ ಅಂತ ಕಥೆ ಕಟ್ಟಿ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಅಶೋಕ್ ತನ್ನ ಪತ್ನಿ ರೋಜಾಳನ್ನು ಹೊಲದಲ್ಲಿ ಕೊಲೆ ಮಾಡಿದ್ದನು ಎನ್ನಲಾಗಿದೆ.
ವಿಪರೀತವಾಗಿದ್ದ ಸಾಲ ಹಾಗೂ ಬೇರೆಯವಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಿಂದಾಗಿ ಪತ್ನಿಯನ್ನು ಗಂಡನೇ ಕೊಲೆ ಮಾಡಿರೋದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ರೋಜಾಳ ಅಂತ್ಯಕ್ರಿಯೆ ನಡೆದ ಬಳಿಕ ಆಕೆಯ ಕುಟುಂಬದವರು ದಾವಣಗೆರೆಯ ಹೊನ್ನಾಳಿ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸ್ ತನಿಖೆ ವೇಳೆ ರೋಜಾಳನ್ನು ಕೊಲೆ ಮಾಡಿರುವುದು ಬಯಲಾಗಿದೆ.