Publish Date: Wed, 01 Dec 2021 (10:19 IST)
Updated Date: Wed, 01 Dec 2021 (10:20 IST)
ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದ ಕೊಲೆಗಾರ ಪತಿಗೆ ತುಮಕೂರಿನಲ್ಲಿ ಜೀವಾವಧಿ ಶಿಕ್ಷೆಯಾಗಿದೆ.
2015 ರಲ್ಲಿ ಘಟನೆ ನಡೆದಿತ್ತು. ಪ್ರೀತಿಸಿ ಮದುವೆಯಾದ ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಘಟನೆ ನಡೆದ ದಿನ ಕ್ಷುಲ್ಲುಕ ಕಾರಣಕ್ಕೆ ಪತ್ನಿಯ ಮೇಲೆ ಆಕ್ರೋಶಗೊಂಡು ಪತಿ ಕಡುಗೋಲಿನಿಂದ ತಲೆಗೆ ಹೊಡೆದಿದ್ದ.
ಪರಿಣಾಮ ಆಕೆಯ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಳು. ಈ ಸಂಬಂಧ ತನಿಖೆ ನಡೆದಿದ್ದು, ಇದೀಗ ಆರೋಪ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದೆ.