Publish Date: Wed, 01 Dec 2021 (10:13 IST)
Updated Date: Wed, 01 Dec 2021 (10:15 IST)
ದೇವನಹಳ್ಳಿ : ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ ಹಿನ್ನೆಲೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದೆ.
ಇಂದಿನಿಂದ ಏರ್ಪೋರ್ಟ್ಗಳಲ್ಲಿ ಹೊಸ ಗೈಡ್ಲೈನ್ಸ್ ಜಾರಿಯಾಗಲಿದೆ. ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರಿಗೆ ಹೊಸಮಾರ್ಗಸೂಚಿ ಹೊರಡಿಸಿದ್ದು, ಹೈರಿಸ್ಕ್ ದೇಶಗಳಿಂದ ಬಂದವರಿಗೆ ಏರ್ಪೋರ್ಟ್ಗಳಲ್ಲಿ ಕಡ್ಡಾಯವಾಗಿ ಟೆಸ್ಟಿಂಗ್, ಮಾಡಲಾಗುತ್ತದೆ.
ಟೆಸ್ಟಿಂಗ್ ನಂತರ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗುತ್ತದೆ. ನೆಗೆಟಿವ್ ಬಂದರೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಬಂದ ಎಲ್ಲಾ ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣಿಡಲು ಸರ್ಕಾರ ಸೂಚಿಸಿದೆ.
ಏರ್ಪೋರ್ಟ್ಗಳಲ್ಲಿ ವಿಳಾಸ, ಪೋನ್ ನಂಬರ್ ಪಡೆದುಕೊಂಡು ಕಳಿಸಲಾಗುತ್ತದೆ. ಇನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇದೇ ಮಾರ್ಗಚೂಚಿಗಳು ಅನ್ವಯವಾಗುತ್ತದೆ.
ದೇಶದಿಂದ ಬರುವವರು ಕಳೆದ 14 ದಿನಗಳ ಪ್ರಯಾಣದ ಇತಿಹಾಸವನ್ನು ನೀಡಬೇಕು. ನವೀಕರಿಸಿದ ಮಾರ್ಗಸೂಚಿಗಳಲ್ಲಿ ಹೈರಿಸ್ಕ್ ದೇಶಗಳಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರು (ಕೊವಿಡ್ ಲಸಿಕೆ ಪಡೆದಿದ್ದರೂ) ಆಗಮನದ ನಂತರ ಕಡ್ಡಾಯವಾಗಿ ಕೊವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಹೊರಡುವ 72 ಗಂಟೆಗಳ ಮೊದಲು ಕೊವಿಡ್-19 ಪರೀಕ್ಷೆ ಮಾಡಿಸಬೇಕು.