Select Your Language

Notifications

webdunia
webdunia
webdunia
webdunia

ಇಂದು ಲಖನೌದಲ್ಲಿ ರೈತ ಮಹಾಪಂಚಾಯಿತಿ!

ಇಂದು ಲಖನೌದಲ್ಲಿ ರೈತ ಮಹಾಪಂಚಾಯಿತಿ!
ನವದೆಹಲಿ , ಸೋಮವಾರ, 22 ನವೆಂಬರ್ 2021 (08:04 IST)
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದೆ.
ಆದರೆ ಅವುಗಳನ್ನು ಸಂಸತ್ ಅಧಿವೇಶನದ ವೇಳೆ ಅಧಿಕೃತವಾಗಿ ವಾಪಸ್ ಪಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇನ್ನೂ ಬಗೆಹರಿದಿಲ್ಲ. ಜೊತೆಗೆ ಈ ಕಾನೂನುಗಳಿಗೆ ಬೇರೆ ಯಾವ ರೀತಿಯ ತಿದ್ದುಪಡಿಗಳನ್ನು ತರಲಿದೆಯೋ ಎಂಬ ಅನುಮಾನಗಳು ಬಗೆಹರಿದಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಉತ್ತರ ಪ್ರದೇಶದ ಲಖನೌದಲ್ಲಿ ಇಂದು ರೈತ ಮಹಾಪಂಚಾಯಿತಿ ಹಮ್ಮಿಕೊಳ್ಳಲಾಗಿದೆ.
ಕಳೆದ ಒಂದು ವರ್ಷದಿಂದ ಕೃಷಿ ಕಾಯಿದೆ ಹೋರಾಟ ಮಾಡುತ್ತಾ ಮೃತಪಟ್ಟ 700ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಪರಿಹಾರ ನೀಡುವುದು. ಇದೇ ಹೋರಾಟದಲ್ಲಿ ತೊಡಗಿದ್ದ ರೈತರ ವಿರುದ್ಧದ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳುವುದು ಹಾಗೂ ರೈತರ ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡುವುದು ಸೇರಿದಂತೆ ರೈತರ ಪ್ರಮುಖ ಬೇಡಿಕೆಗಳ ಬಗ್ಗೆ ಇಂದಿನ ರೈತ ಮಹಾಪಂಚಾಯತಿಯಲ್ಲಿ ಚರ್ಚೆ ನಡೆಸಲಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ಬೆಂಗಳೂರು ಮುಳುಗುತ್ತಿದೆಯೇ!