Publish Date: Tue, 15 Mar 2022 (10:02 IST)
Updated Date: Tue, 15 Mar 2022 (10:32 IST)
ಕಲಬುರಗಿ: ಪತ್ನಿಯನ್ನು ಕೊಲೆ ಮಾಡಿ ಬಳಿಕ ಅತ್ಯಾಚಾರವಾಗಿ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಪತಿ ಆಕೆಯ ಮೃತದೇಹವನ್ನು ಊರ ಹೊರಗಿನ ಜಮೀನನಲ್ಲಿ ಬಿಸಾಕಿದ್ದ. ಬಳಿಕ ಯಾರೋ ನನ್ನ ಪತ್ನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ.
ವಿಚಾರಣೆ ನಡೆಸಿದಾಗ ಪೊಲೀಸರಿಗೆ ಪತಿಯ ನಡೆ ಅನುಮಾನ ಮೂಡಿಸಿತ್ತು. ತನಿಖೆ ನಡೆಸಿದಾಗ ಪತಿಯೇ ಪತ್ನಿಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.