Select Your Language

Notifications

webdunia
webdunia
webdunia
webdunia

ನಗರದ ಹೆಬ್ಬಾಳ ಫ್ಲೈಓವರ್​ ಕೆಳಗೆ ಅಪ್ಪು ಡ್ಯಾನ್ಸ್​ ಮಾಡುವ ರೀತಿಯಲ್ಲಿ ಬೃಹತ್ ಕಟೌಟ್

ನಗರದ ಹೆಬ್ಬಾಳ ಫ್ಲೈಓವರ್​ ಕೆಳಗೆ ಅಪ್ಪು ಡ್ಯಾನ್ಸ್​ ಮಾಡುವ  ರೀತಿಯಲ್ಲಿ ಬೃಹತ್ ಕಟೌಟ್
bangalore , ಬುಧವಾರ, 3 ನವೆಂಬರ್ 2021 (20:57 IST)
ಬೆಂಗಳೂರು:  ಸ್ಯಾಂಡಲ್ ವುಡ್ ನ "ಯುವರತ್ನ" ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ದೈಹಿಕವಾಗಿ ಕುಟುಂಬದಿಂದ ಹಾಗೂ ಅಭಿಮಾನಿಗಳಿಂದ ದೂರವಾದರೂ ಕೂಡ   ಚಿತ್ರಗಳ ಮೂಲಕ ಹಾಡುಗಳ ಮೂಲಕ  ಅಚ್ಚಳಿಯದೆ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ  ಹೆಬ್ಬಾಳ ಫ್ಲೈಓವರ್​ ಕೆಳಗೆ  ಅಪ್ಪು ಡಾನ್ಸ್ ಮಾಡುವತಿರುವ  ಬೃಹತ್ ಕಟೌಟ್​ ಹಾಕಲಾಗಿದೆ.
 
ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆ ಡ್ಯಾನ್ಸ್​ ಸೇರಿ ಸಕಲಕಲಾ ವಲ್ಲಭರಾಗಿದ್ದರು. ಅಪ್ಪು ನಿಧನರಾಗಿ ಇಂದಿಗೆ 6  ನೇಯ ದಿನವಾದರೂ ಕೂಡ ಪುನೀತ್ ರಾಜ್​ಕುಮಾರ್​ ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ಅಭಿಮಾನಿಗಳು ಇನ್ನೂ ನಂಬಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಬ್ಬಾಳ ಫ್ಲೈಓವರ್​ನಲ್ಲಿ ಅಪ್ಪುವಿನ ಬೃಹತ್ ಕಟೌಟ್​ ಹಾಕಲಾಗಿದೆ. ವಿಶಷವಾಗಿ ಅಪ್ಪು ಡ್ಯಾನ್ಸ್​ ಮಾಡೋ ರೀತಿಯಲ್ಲಿ ಈ ಕಟೌಟ್​ ರೂಪಿಸಲಾಗಿದ್ದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್​​​ 16ಕ್ಕೆ ‘ಪುನೀತ್​ ನಮನ’ ಕಾರ್ಯಕ್ರಮ