Select Your Language

Notifications

webdunia
webdunia
webdunia
webdunia

ನಗರದಲ್ಲಿ ಪುನೀತ್ ಕಂಚಿನ ಪ್ರತಿಮೆಗೆ ಡಿಮ್ಯಾಂಡ್: ಅಪ್ಪು ಶ್ರದ್ಧಾಂಜಲಿ ಕಾರ್ಯಕ್ರಮದ ತಯಾರಿ

ನಗರದಲ್ಲಿ ಪುನೀತ್ ಕಂಚಿನ ಪ್ರತಿಮೆಗೆ ಡಿಮ್ಯಾಂಡ್:  ಅಪ್ಪು ಶ್ರದ್ಧಾಂಜಲಿ ಕಾರ್ಯಕ್ರಮದ ತಯಾರಿ
bangalore , ಬುಧವಾರ, 3 ನವೆಂಬರ್ 2021 (20:48 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಮಾಧಿ ಸ್ಥಳದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಸಹಸ್ರಾರು ಪುನೀತ್ ಅಭಿಮಾನಿಗಳು ಅಪ್ಪುವಿನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ದರ್ಶನ ಪಡೆದರು.
 
ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ:
 
ಪುನೀತ್ ರಾಜ್ ಕುಮಾರ್ ಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ನ ನಟ ನಟಿಯರನ್ನು ಶ್ರದ್ಧಾಂಜಲಿ ಸಭೆಗೆ ಆಹ್ವಾನಿಸಲಾಗುತ್ತಿದೆ.
 
ಕಂಚಿನ ಪ್ರತಿಮೆಗಳಿಗೆ ಡಿಮ್ಯಾಂಡ್: 
 
ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ವೃತ್ತ ಹಾಗೂ ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಲಾಗುತ್ತಿದೆ.ನಗರದ ವೃತ್ತಗಳಲ್ಲಿ ಪುನೀತ್ ರಾಜ್ ಕುಮಾರ್ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಶಿಲ್ಪ ಕಲಾವಿದರಿಗೆ ಆರ್ಡರ್ ನೀಡಲಾಗುತ್ತಿದೆ. ಬೆಂಗಳೂರಿನ ಹಲವು ಶಿಲ್ಪ ಕಲಾವಿದರು ಅಪ್ಪುವಿನ ಕಂಚಿನ ನಿರ್ಮಾಣ ಕಾರ್ಯದಲ್ಲಿ ದೊಡಗಿದ್ದಾರೆ ಎಂಬ ಮಾಹಿತಿ ದೊರೆತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದು ಉಚಿತ ಶಿಕ್ಷಣ 10ನೇ ತರಗತಿವರೆಗೂ ವಿಸ್ತರಿಸಿ: ಆಪ್ ಆಗ್ರಹ