Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3 ಗಾಗಿ ಕಿಚ್ಚ ಸುದೀಪ್ ಬೃಹತ್ ಕಟೌಟ್

ಕೋಟಿಗೊಬ್ಬ 3 ಗಾಗಿ ಕಿಚ್ಚ ಸುದೀಪ್ ಬೃಹತ್ ಕಟೌಟ್
ಬೆಂಗಳೂರು , ಸೋಮವಾರ, 27 ಸೆಪ್ಟಂಬರ್ 2021 (09:05 IST)
ಬೆಂಗಳೂರು: ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ನೀಡುತ್ತಿದ್ದಂತೇ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಸಿನಿಮಾಗಳ ಬಿಡುಗಡೆಗೆ ತಯಾರಿ ಜೋರಾಗಿ ಆರಂಭವಾಗಿದೆ.


ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ 14 ಕ್ಕೆ ತೆರೆ ಕಾಣಲಿದ್ದು, ಅದಕ್ಕೆ ಅಭಿಮಾನಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬೃಹತ್ ಕಟೌಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಪ್ರಚಾರಕ್ಕೆ ಸುದೀಪ್ ರ ಬೃಹತ್ ಕಟೌಟ್ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇದು 120 ಅಡಿ ಎತ್ತರದ್ದಾಗಿರಲಿದೆ ಎನ್ನಲಾಗಿದೆ. ಆ ಮೂಲಕ ಕಿಚ್ಚನ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಗೂ ನನಗೂ ಪೈಪೋಟಿಯಿಲ್ಲ: ದುನಿಯಾ ವಿಜಯ್