Select Your Language

Notifications

webdunia
webdunia
webdunia
webdunia

ಒಂದೇ ದಿನ ಸಲಗ, ಕೋಟಿಗೊಬ್ಬ 3 ರಿಲೀಸ್: ಸಲಗ ತಂಡಕ್ಕೆ ಸುದೀಪ್ ಹೇಳಿದ್ದೇನು?

ಒಂದೇ ದಿನ ಸಲಗ, ಕೋಟಿಗೊಬ್ಬ 3 ರಿಲೀಸ್: ಸಲಗ ತಂಡಕ್ಕೆ ಸುದೀಪ್ ಹೇಳಿದ್ದೇನು?
ಬೆಂಗಳೂರು , ಭಾನುವಾರ, 26 ಸೆಪ್ಟಂಬರ್ 2021 (17:05 IST)
ಬೆಂಗಳೂರು: ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ಕೊಟ್ಟ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆ ದಿನಾಂಕ ಅನೌನ್ಸ್ ಮಾಡುತ್ತಿವೆ. ಅದರಲ್ಲೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ದುನಿಯಾ ವಿಜಯ್ ಅವರ ಸಲಗ ಒಂದೇ ದಿನ ತೆರೆ ಕಾಣುತ್ತಿದೆ.


ಅಕ್ಟೋಬರ್ 14 ಕ್ಕೆ ಎರಡೂ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದೇ ದಿನ ಎರಡು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣವುಂಟು ಮಾಡಿದೆ.

ಇದರ ಬೆನ್ನಲ್ಲೇ ಸುದೀಪ್, ಸಲಗ ಟೀಂಗೆ ವಿಶ್ ಮಾಡಿರುವುದು ವಿಶೇಷವಾಗಿದೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಮತ್ತು ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ದುನಿಯಾ ವಿಜಿಗೆ ನನ್ನ ಶುಭ ಹಾರೈಕೆಗಳು. ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ, ತಂಡಕ್ಕೆ ಶುಭವಾಗಲಿ ಎಂದು ಸುದೀಪ್ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಲೀಸ್ ಡೇಟ್ ಅನೌನ್ಸ್ ಮಾಡಿದ ಭಜರಂಗಿ 2, ಸಲಗ, ಕೋಟಿಗೊಬ್ಬ 3