ಬೆಂಗಳೂರು: ಥಿಯೇಟರ್ ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ಮಂದಿ ಮೊಗದಲ್ಲಿ ನಗು ಮೂಡಿದೆ.
ಇಷ್ಟು ದಿನದಿಂದ ಹಲವು ಸಿನಿಮಾಗಳು ಬಿಡುಗಡೆಯಾಗದೇ ಸ್ಯಾಂಡಲ್ ವುಡ್ ನಿರ್ಮಾಪಕರು, ಥಿಯೇಟರ್ ಮಾಲಿಕರಿಗೆ ಭಾರೀ ನಷ್ಟವಾಗಿತ್ತು. ಚಿತ್ರರಂಗ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು.
ಈಗ ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡಿರುವ ಕಾರಣಕ್ಕೆ ಸ್ಟಾರ್ ಸಿನಿಮಾಗಳೂ ಬಿಡುಗಡೆಯಾಗಲಿವೆ. ರಾಜ್ಯ ಸರ್ಕಾರದ ನಿರ್ಧಾರವನ್ನು ನಟ ಡಾಲಿ ಧನಂಜಯ್, ವಿಜಯ್ ಸೂರ್ಯ ಸೇರಿದಂತೆ ಅನೇಕರು ಸ್ವಾಗತಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದಾಗಿ ಮತ್ತಷ್ಟು ಸಿನಿಮಾಗಳು ರಿಲೀಸ್ ಜೊತೆಗೆ ಸೆಟ್ಟೇರಲಿವೆ.