ಬೆಂಗಳೂರು: ಸಲಗ ಮತ್ತು ಕೋಟಿಗೊಬ್ಬ 3 ಸಿನಿಮಾಗಳು ಒಂದೇ ದಿನ ಬಿಡುಗಡೆ ದಿನಾಂಕ ಘೋಷಿಸಿದ ಬೆನ್ನಲ್ಲೇ ವಿವಾದ ಶುರುವಾಗಿದೆ.
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಮತ್ತು ದುನಿಯಾ ವಿಜಯ್ ಅವರ ಸಲಗ ಅಕ್ಟೋಬರ್ 14 ಕ್ಕೆ ರಿಲೀಸ್ ಆಗುತ್ತಿದೆ. ಒಂದೇ ದಿನ ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ ಗಳಿಕೆಗೆ ಹೊಡೆತ ಬೀಳಲಿದೆ.
ಇದರ ನಡುವೆ ದುನಿಯಾ ವಿಜಯ್ ಮಾಧ‍್ಯಮಗಳಿಗೆ ಹೇಳಿಕೆ ನೀಡಿದ್ದು, ನನಗೂ ಸುದೀಪ್ ಗೂ ಪೈಪೋಟಿಯಿಲ್ಲ. ಸುದೀಪ್ ನಮ್ಮ ಸಿನಿಮಾಗೆ ಶುಭ ಹಾರೈಸಿದ್ದಾರೆ. ನಮ್ಮ ನಡುವೆ ತಂದಿಡುವ ಪ್ರಯತ್ನ ಮಾಡಿದರೆ ಪ್ರಯೋಜನವಾಗಲ್ಲ. ನಾವು ಚೆನ್ನಾಗಿಯೇ ಇರುತ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದರ ನಡುವೆಯೇ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ‍್ಯತೆಯಿದೆ. ಎರಡೂ ಸಿನಿಮಾಗಳ ನಿರ್ಮಾಪಕರು ಒಟ್ಟಿಗೆ ಕೂತು ಮಾತುಕತೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.