Select Your Language

Notifications

webdunia
webdunia
webdunia
webdunia

ನಿಮ್ಮ ವಾಹನಗಳಿಗೆ ಹೆಚ್​​ಎಸ್​​ಆರ್​​ಪಿ ನಂಬರ್‌ ಹಾಕಿಲ್ವ: ಇನ್ನು ನಿಮಗಿರುವುದು ಕೆಲವು ದಿನಗಳು ಮಾತ್ರ

ನಿಮ್ಮ ವಾಹನಗಳಿಗೆ ಹೆಚ್​​ಎಸ್​​ಆರ್​​ಪಿ ನಂಬರ್‌ ಹಾಕಿಲ್ವ: ಇನ್ನು ನಿಮಗಿರುವುದು ಕೆಲವು ದಿನಗಳು ಮಾತ್ರ

Sampriya

ಬೆಂಗಳೂರು , ಶನಿವಾರ, 4 ಜನವರಿ 2025 (15:07 IST)
Photo Courtesy X
ಬೆಂಗಳೂರು: ವಾಹನಗಳ ಹೈಸೆಕ್ಯೂರಿಟಿ ನಂಬರ್​ ಪ್ಲೇಟ್​ (ಹೆಚ್​​ಎಸ್​​ಆರ್​​ಪಿ) ನಂಬರ್​ ಪ್ಲೇಟ್ ಅಳವಡಿಕೆ ಗಡುವು ಮತ್ತೆ ವಿಸ್ತರಣೆಯಾಗಿದೆ.  ಸಾರಿಗೆ ಇಲಾಖೆ ಈವರೆಗೆ 6 ಬಾರಿನೇ ಗಡುವು ವಿಸ್ತರಣೆ ಮಾಡಿ ಗ್ರಾಹಕರಿಗೆ ಅವಕಾಶ ನೀಡಿದೆ.

ಹೆಚ್​​ಎಸ್​​ಆರ್​​ಪಿ ನಂಬರ್​ ಪ್ಲೇಟ್​ ಅಳವಡಿಕೆಗೆ 6 ಬಾರಿ ಸಮಯ ವಿಸ್ತರಿಸಿದರೂ ಸಹ ವಾಹನ ಮಾಲೀಕರು ತಮ್ಮ ವಾಹನಕ್ಕೆ ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಸಿಕೊಂಡಿಲ್ಲ. ಹೀಗಾಗಿ, ರಾಜ್ಯ ಸಾರಿಗೆ ಇಲಾಖೆ ಮತ್ತೊಂದು ಅವಕಾಶ ನೀಡಿದೆ. ಈ ತಿಂಗಳು ಕೊನೆ ಅಂದರೆ ಜನವರಿ 31ರವರೆಗೆ ಹೆಚ್​​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆಗೆ ಸಮಯ ನೀಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಹೈಸೆಕ್ಯೂರಿಟಿ ನಂಬರ್​ ಪ್ಲೇಟ್​ ಅಳವಡಿಕೆಗೆ ಈಗಾಗಲೇ ಅವಧಿ ಮುಗಿದಿದ್ದರೂ ಸಹ ರಾಜ್ಯ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಇದೆ. ಬರೊಬ್ಬರಿ ಆರು ಬಾರಿ ಗಡುವು ವಿಸ್ತರಿಸಿದೆ. 2019ಕ್ಕೂ ಮೊದಲು ನೋಂದಣಿಯಾದ ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆ ಮಾಡಿಕೊಳ್ಳಬೇಕು.

ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್‌ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಬೇಕಿದೆ. ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದರ್ಥ. ಕರ್ನಾಟಕದ ವಾಹಗಳಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.

ಒಂದು ವೇಳೆ ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ. ಸಾರಿಗೆ ಇಲಾಖೆ ಹೊರಡಿಸಿರುವ ಈ ಸೂಚನೆಯಿಂದ ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಾಯಕವಾಗಲಿದೆ.
==

Share this Story:

Follow Webdunia kannada

ಮುಂದಿನ ಸುದ್ದಿ

ಜಾತಿ ರಾಜಕಾರಣದ ವಿಷ ಹರಡಿ ಶಾಂತಿ ಕದಡಲು ಪ್ರಯತ್ನ: ಮೋದಿ ಹೀಗೆ ಹೇಳಿದ್ದು ಯಾರಿಗೆ