Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಖಾತಾ ಸರ್ಟಿಫಿಕೇಟ್ ಆನ್ ಲೈನ್ ನಲ್ಲಿ ಪಡೆಯುವುದು ಹೇಗೆ

BBMP

Krishnaveni K

ಬೆಂಗಳೂರು , ಶನಿವಾರ, 13 ಡಿಸೆಂಬರ್ 2025 (09:48 IST)
ಆಸ್ತಿ ನೋಂದಣಿ ಡಿಜಿಟಲೀಕರಣಗೊಳಿಸುವ ನಿಟ್ಟಿನಿಂದ ರಾಜ್ಯ ಸರ್ಕಾರ ಈಗ ಇ ಖಾತಾ ಮಾಡಿಸಿಕೊಳ್ಳಲು ಸೂಚಿಸುತ್ತದೆ. ನಿಮ್ಮದು ಎ ಅಥವಾ ಬಿ ಖಾತಾ ಆಗಿದ್ದಲ್ಲಿ ಆನ್ ಲೈನ್ ಮೂಲಕ ನೋಂದಣಿ ಸರ್ಟಿಫಿಕೇಟ್ ಪಡೆಯುವುದು ಹೇಗೆ ಇಲ್ಲಿದೆ ನೋಡಿ ವಿಧಾನ.

- sevasindhu.karnataka.gov.in ಎಂಬ ಪೋರ್ಟಲ್ ಗೆ ಹೋಗಿ ಡಿಪಾರ್ಟ್ ಮೆಂಟ್ ಮತ್ತು ಸರ್ವಿಸ್ ಕ್ಲಿಕ್ ಮಾಡಿ. ಇಲ್ಲಿ ಬಿಡಿಎ ಎಂದು ಆಯ್ಕೆ ಮಾಡಿ.
-ಅಪ್ಲಿಕೇಷನ್ ಫಾರ್ ನ್ಯೂ ಇ ಖಾತಾ ಆಯ್ಕೆ ಮಾಡಿ ಮತ್ತು ನಂತರ ಅಪ್ಲೈ ಆನ್ ಲೈನ್ ಕ್ಲಿಕ್ ಮಾಡಿ.
-ಈಗ ಲಾಗಿನ್ ಆಗಿ ಅಥವಾ ಹೊಸಬರಾಗಿದ್ದರೆ ನ್ಯೂ ಯೂಸರ್ ಕ್ಲಿಕ್ ಮಾಡಿ ಲಾಗಿನ್ ಆಗಿ.
-ಈಗ ಅರ್ಜಿಯಲ್ಲಿ ನಿಮ್ಮ ಮಾಹಿತಿಗಳನ್ನು ತುಂಬಿ.
-ಸೇಲ್ ಡೀಡ್, ಆಸ್ತಿ ತೆರಿಗೆ, ಇತ್ತೀಚೆಗೆ ಪಾವತಿಸಿದ ತೆರಿಗೆ ಮಾಹಿತಿ ಇತ್ಯಾದಿ ದಾಖಲೆಗಳನ್ನು ಅಪ್ ಲೋಡ್ ಮಾಡಿ.
-ಮಾಹಿತಿಗಳನ್ನು ಸೇವ್ ಮಾಡಿ ನಂತರ ಇ ಸೈನ್ ಮತ್ತು ಸಬ್ ಮಿಟ್ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಒಟಿಪಿಯನ್ನು ದೃಢೀಕರಣಗೊಳಿಸಿ.
-ಕೊನೆಯಲ್ಲಿ ಸ್ವೀಕೃತಿ ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ನಿಮ್ಮ ಅರ್ಜಿಯ ಸ್ಥಿತಿಗತಿಯ ವಿವರ ಪಡೆಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

Gen Z ಗಾಗಿ ಅಂಚೆ ಇಲಾಖೆಯಿಂದ ಹೊಸ ಪ್ಲ್ಯಾನ್: ಇಲ್ಲಿದೆ ಡೀಟೈಲ್ಸ್