Select Your Language

Notifications

webdunia
webdunia
webdunia
webdunia

ಡಾ ಕೃತಿಕಾ ರೆಡ್ಡಿ ಕೊಲ್ಲಲು ಡಾ ಮಹೇಂದ್ರ ರೆಡ್ಡಿ ಅನಸ್ತೇಷಿಯಾ ಕದ್ದಿದ್ದು ಎಲ್ಲಿಂದ ಗೊತ್ತಾ

Dr Kritika Reddy-Dr Mahendra Reddy

Krishnaveni K

ಬೆಂಗಳೂರು , ಶುಕ್ರವಾರ, 17 ಅಕ್ಟೋಬರ್ 2025 (12:13 IST)
ಬೆಂಗಳೂರು: ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಡಾ ಕೃತಿಕಾ ರೆಡ್ಡಿ ಮರ್ಡರ್ ಕೇಸ್ ತನಿಖೆ ಪ್ರಗತಿಯಲ್ಲಿದೆ. ಇದೀಗ ಆರೋಪಿ ಪತಿ ಡಾ ಮಹೇಂದ್ರ ರೆಡ್ಡಿ ಅನಸ್ತೇಷಿಯಾ ಕದ್ದಿದ್ದು ಎಲ್ಲಿಂದ ಎಂದು ಗೊತ್ತಾಗಿದೆ.

ಪತ್ನಿಗೆ ಗ್ಯಾಸ್ಟ್ರಿಕ್, ಅಸಿಡಿಟಿ ಸಮಸ್ಯೆಯಿದೆ ಎಂದು ಐವಿ ಅಳವಡಿಸಿ ಹೈ ಡೋಸ್ ಅನಸ್ತೇಷಿಯಾ ಕೊಟ್ಟು ಆಕೆಯನ್ನು ಮಹೇಂದ್ರ ರೆಡ್ಡಿ ಕೊಲೆ ಮಾಡಿದ್ದ ಎಂಬುದು ಎಫ್ಎಸ್ಎಲ್ ವರದಿಯಿಂದ ಹೊರಬಂದಿತ್ತು.

ಅನಸ್ತೇಷಿಯಾ ಡ್ರಗ್ ಹಾಗೆಲ್ಲಾ ಸಿಕ್ಕ ಸಿಕ್ಕಲ್ಲಿ ಸಿಗಲ್ಲ. ಹೀಗಾಗಿ ಆತನಿಗೆ ಈ ಕೃತ್ಯವೆಸಗಲು ಅನಸ್ತೇಷಿಯಾ ಎಲ್ಲಿಂದ ಸಿಕ್ಕಿತ್ತು ಎಂದು ಪೊಲೀಸರು ತನಿಖೆ ಮಾಡಿದ್ದಾರೆ. ಈ ವೇಳೆ ತಾನು ಕೆಲಸ ಮಾಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ಅನಸ್ತೇಷಿಯಾ ಕದ್ದು ತಂದಿದ್ದ ಎಂದು ಎನ್ನಲಾಗಿದೆ.

ಇದುವರೆಗೆ ಆತ ಪತ್ನಿಯನ್ನು ನಾನು ಕೊಲೆ ಮಾಡಿಲ್ಲ ಎಂದು ಪ್ರತಿಪಾದಿಸುತ್ತಲೇ ಇದ್ದಾನೆ. ಹೀಗಾಗಿ ಆತನನ್ನು ಸುದಿರ್ಘವಾಗಿ ವಿಚಾರಣೆಗೊಳಪಡಿಸಲಿರುವ ಪೊಲೀಸರು ಸತ್ಯ ಬಾಯಿ ಬಿಡಿಸಲು ಪ್ರಯತ್ನ ನಡೆಸಲಿದ್ದಾರೆ. ಈಗಾಗಲೇ ಆತನ ಮನೆಗೆ ಬಂದು ಆತನಿಗೆ ಸಂಬಂಧಪಟ್ಟ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾರ ಅಗತ್ಯಕ್ಕಿಂತ ಜಾಸ್ತಿಯಿದ್ರೆ ಒಳ್ಳೇದಲ್ಲ: ನಾರಾ ಲೋಕೇಶ್ ಗೆ ಪ್ರಿಯಾಂಕ್ ಖರ್ಗೆ ತಿರುಗೇಟು