Publish Date: Wed, 25 Oct 2017 (16:21 IST)
Updated Date: Wed, 25 Oct 2017 (16:23 IST)
ನಾವು ರಾಷ್ಟ್ರಪತಿಯವರಿಗೆ ಭಾಷಣ ಬರೆದುಕೊಡಲು ಆಗುತ್ತಾ, ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ತಾವೇ ಸಿದ್ದಪಡಿಸಿದ ಭಾಷಣವನ್ನು ಓದಿದ್ದಾರೆ. ಸುಳ್ಳು ಹೇಳುವುದು ಬಿಟ್ಟರೆ ಬಿಜೆಪಿಯವರಿಗೆ ಏನು ಬರೋಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಿಪ್ಪು ಸುಲ್ತಾನ್‌ರನ್ನು ಹಾಡಿ ಹೊಗಳಿ ಅವರೇ ಮುನ್ನುಡಿ ಬರೆದು ಅದರ ಕೆಳಗೆ ಸಹಿ ಮಾಡಿದ್ದಾರೆ. ಇದೀಗ ಬಿಜೆಪಿಯವರು ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಇದೇ ಯಡಿಯೂರಪ್ಪ ಕೆಜಿಪಿಯಲ್ಲಿದ್ದಾಗ ಏನು ಮಾಡಿದ್ದರು? ಕೈಯಲ್ಲಿ ಖಡ್ಗ ಹಿಡಿದು ಟಿಪ್ಪು ಸುಲ್ತಾನ್‌ರನ್ನು ಹೊಗಳಿದ್ದರು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೂಡಾ ಟಿಪ್ಪು ಸುಲ್ತಾನ್ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಎನ್ನುವುದು ಬಿಜೆಪಿ ಮರೆತಂತಿದೆ ಎಂದು ಗುಡುಗಿದರು.
ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು ಅಲ್ಲಾಹನ ಮೇಲೆ ಆಣೆ ಮಾಡಿ ಹೇಳ್ತೇನೆ. ಮುಂದೆ ಯಾವತ್ತು ಬಿಜೆಪಿಗೆ ಹೋಗೋಲ್ಲ ಎಂದಿದ್ದರು. ಅವರಿಗೆ ತತ್ವವು ಇಲ್ಲ, ಸಿದ್ದಾಂತವೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.