Select Your Language

Notifications

webdunia
webdunia
webdunia
webdunia

ವಜ್ರ ಮಹೋತ್ಸವದ ವಿಶೇಷ ಕಾರ್ಯಕ್ರಮಗಳೇನು

ವಜ್ರ ಮಹೋತ್ಸವದ ವಿಶೇಷ ಕಾರ್ಯಕ್ರಮಗಳೇನು
ಬೆಂಗಳೂರು , ಬುಧವಾರ, 25 ಅಕ್ಟೋಬರ್ 2017 (12:15 IST)
ಬೆಂಗಳೂರು: ಅದ್ಭುತ ಶಿಲ್ಪಕಲಾ ವೈಭವ ಹೊಂದಿರುವ ವಿಧಾನಸೌಧಕ್ಕೆ ವಜ್ರ ಮಹೋತ್ಸವದ ಸಂಭ್ರಮ. ಹೀಗಾಗಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಅವುಗಳ ಕುರಿತಾದ ಮಾಹಿತಿ ಇಲ್ಲಿದೆ.

ಈಗಾಗಲೇ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಆರಂಭಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಷ್ಟ್ರಪತಿ ಅವರಿಂದ ವಿಧಾನಪರಿಷತ್ ಸಭಾಂಗಣ ವೀಕ್ಷಿಸಲಿದ್ದಾರೆ. ನಂತರ ಗಾಂಧಿ ಪ್ರತಿಮೆ ಎದುರು ರಾಷ್ಟ್ರಪತಿಗಳೊಂದಿಗೆ ಉಭಯ ಸದನಗಳ ಶಾಸಕರ ಗ್ರೂಪ್ ಫೋಟೊ ಸೆಷನ್‌ ನಡೆಯಲಿದೆ.

ಮಧ್ಯಾಹ್ನ 1.30ಕ್ಕೆ ವಿಧಾನಸೌಧದ ಹುಲ್ಲುಹಾಸಿನ ಮೇಲೆ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ. ಮಧ್ಯಾಹ್ನ 3ರಿಂದ 5ರವರೆಗೆ ವಿಧಾನಸೌಧ ಕಟ್ಟಡ ನಿರ್ಮಾಣ ಕುರಿತಾದ ಸಾಕ್ಷ್ಯಚಿತ್ರ ಹಾಗೂ ವಿಧಾನಮಂಡಲ ಶಾಸನಸಭೆ ನಡೆದುಬಂದ ಹಾದಿ ಸಾಕ್ಷ್ಯಚಿತ್ರ ಪ್ರದರ್ಶನವಿದೆ. ಸಂಜೆ 5ರಿಂದ 6ರವರೆಗೆ ವಿವಿಧ ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ 6.30ರವರೆಗೆ ಗೌರವ ಸಮರ್ಪಣೆ, 6.30ರಿಂದ ಹಂಸಲೇಖ ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮವಿದೆ. ಸಮಾನಾಂತರವಾಗಿ ವಿಧಾನಸೌಧ ಕಟ್ಟಡದ ಮೇಲೆ 3ಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಯೋಜನೆಗಳ ಚಿತ್ರ ಪ್ರದರ್ಶನಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರಂಗದಲ್ಲಿ ಪತ್ತೆಯಾಗಿದ್ದು ಶೆರಿನ್ ಶವ: ದೃಢಪಡಿಸಿದ ಪೊಲೀಸರು