Publish Date: Fri, 22 Sep 2017 (20:48 IST)
Updated Date: Fri, 22 Sep 2017 (20:51 IST)
ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ವಿಶೇಷ ಅಧಿವೇಶನ ಮುಂದೂಡಿಕೆಯಾಗಿದೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.
ಅಕ್ಟೋಬರ್ 6 ಮತ್ತು 7 ರಂದು ವಿಧಾನಸೌಧ ವಜ್ರಮಹೋತ್ಸವ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ನಿಗದಿ ಪಡಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಾಷ್ಟ್ರಪತಿಗಳ ಸಮಯ ದೊರೆಯದ ಹಿನ್ನೆಲೆಯಲ್ಲಿ ಪ್ರವಾಸದ ದಿನಾಂಕವನ್ನು ರಾಷ್ಟ್ರಪತಿ ಭವನ ಮುಂದೂಡಿದೆ.
ರಾಷ್ಟ್ರಪತಿಗೆ ಆಹ್ವಾನ ನೀಡಲು ಇವತ್ತು ಸಮಯಾವಕಾಶ ನೀಡಿದ್ರು. ಆದರೆ ಕೊನೆಕ್ಷಣದಲ್ಲಿ ಸಮಯಾವಕಾಶ ರದ್ದಾಗಿದೆ. ರಾಷ್ಟ್ರಪತಿಗಳು ಮುಂದೆ ಯಾವ ದಿನಾಂಕ ನೀಡುತ್ತಾರೊ ಅಂದು ವಜ್ರಮಹೋತ್ಸವದ ವಿಶೇಷ ಅಧಿವೇಶನ ಮಾಡುತ್ತೇವೆ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.