Select Your Language

Notifications

webdunia
webdunia
webdunia
webdunia

ನೀವು ಬಳಸುವ ಉಪ್ಪಿನಲ್ಲಿ ಪ್ಲಾಸ್ಟಿಕ್ ಹೇಗೆ ಸೇರುತ್ತೆ ಗೊತ್ತಾ?

ನೀವು ಬಳಸುವ ಉಪ್ಪಿನಲ್ಲಿ  ಪ್ಲಾಸ್ಟಿಕ್ ಹೇಗೆ ಸೇರುತ್ತೆ ಗೊತ್ತಾ?
ಮುಂಬೈ , ಬುಧವಾರ, 5 ಸೆಪ್ಟಂಬರ್ 2018 (15:00 IST)
ಮುಂಬೈ : ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಹೇಳುತ್ತಾರೆ. ಆದರೆ ಈ ಉಪ್ಪು ಇದೀಗ ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.


ಹೌದು. ಐಐಟಿ ಬಾಂಬೆಯ ಇಬ್ಬರು ಸಂಶೋಧಕರ ತಂಡ ಭಾರತದ ಉಪ್ಪಿನ ಬ್ರಾಂಡ್ ಗಳ ಸುಮಾರು 24 ಕೆಜಿಯಷ್ಟು ಉಪ್ಪನ್ನು ತೆಗೆದುಕೊಂಡು ಪರೀಕ್ಷೆಗೊಳಪಡಿಸಿದೆ. ಈ ವೇಳೆ ಶೇಕಡ 63 ರಷ್ಟು ಉಪ್ಪಿನಲ್ಲಿ ಪ್ರಮಾಣದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಂಡು ಬಂದರೆ. ಇನ್ನು ಹೆಸರಾಂತ ಬ್ರಾಂಡಿನ ಉಪ್ಪಿನಲ್ಲಿ ಶೇಕಡ 37ರಷ್ಟು ಪ್ಲಾಸ್ಟಿಕ್ ಫೈಬರ್‍ ಗಳು ಕಂಡು ಬಂದಿರುವ ಬಗ್ಗೆ ತಮ್ಮ ಸಂಶೋಧನ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.


ಸಮುದ್ರದ ನೀರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಅಂಶವಿರುವ ವಸ್ತುಗಳು ವೀಲಿನಗೊಳ್ಳುತ್ತಿದ್ದು. ಇದು ಕ್ರಮೇಣ ಮೈಕ್ರೋ ಪ್ಲಾಸ್ಟಿಕ್ ಫೈಬರ್‍ ಕಣಗಾಳಗಾಗಿ ಮಾರ್ಪಾಡುಗುತ್ತಿವೆ. ಇದಲ್ಲದೇ ಬಟ್ಟೆ ತೊಳೆದ ನೀರಿನ ಅಂಶದಲ್ಲಿರುವ ಪ್ಲಾಸ್ಟಿಕ್ ಅಂಶಗಳು ಕೂಡ ಸಮುದ್ರ ನೀರನ್ನು ಸೇರುತ್ತಿದ್ದು ಇದು ಪೈಬರ್ ಅಂಶಗಳಾಗಿ ಪರಿವರ್ತನೆಯಾಗುತ್ತದೆ. ಇಂತಹ ಸಮುದ್ರದಲ್ಲಿ ತಯಾರು ಮಾಡಿದ ಉಪ್ಪಿನಲ್ಲಿ ಸಹಜವಾಗಿ ಪ್ಲಾಸ್ಟಿಕ್ ಅಂಶ ಹೆಚ್ಚಾಗುತ್ತಿದ್ದು, ಇದು ಮಾನವನ ಶರೀರವನ್ನು ಸೇರಿ ಆರೋಗ್ಯವನ್ನು ಹಾಳುಮಾಡುತ್ತವೆ ಎಂದು ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಗ್ರಂಥಗಳಿಗೂ ನೀಡಬೇಕು ಜಿ.ಎಸ್.ಟಿ; ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಆದೇಶ