Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು

ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು
ರಾಯಚೂರು , ಬುಧವಾರ, 5 ಸೆಪ್ಟಂಬರ್ 2018 (06:29 IST)
ರಾಯಚೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಅವರ  ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಇದೀಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಅವರ ಮನೆಯ ದೇವರಾಗಿದ್ದ ರಾಯಚೂರು ಸಮೀಪದ ದೇವಸಗೂರಿನಲ್ಲಿರುವ ಸೂಗೂರೇಶ್ವರ ದೇವಸ್ಥಾನಕ್ಕೆ ಸೋಮವಾರ ದೊಡ್ಡಣ್ಣ ಅವರು ಕುಟುಂಬದವರ ಜೊತೆ   ಬಂದಿದ್ದರು. ಆ ವೇಳೆ ಚಳಿ ಜ್ವರದಿಂದ ಬಳಲುತ್ತಿದ್ದು, ಅವರು ತಾವು ಉಳಿದುಕೊಂಡಿದ್ದ ವಸತಿ ಗೃಹದ ಬಾತ್ ರೂಮ್‍ನಲ್ಲಿ ಲೋ ಬಿಪಿಯಾಗಿದ್ದರಿಂದ ಕುಸಿದು ಬಿದ್ದಿದ್ದಾರೆ.


ತಕ್ಷಣ ಅವರನ್ನು ರಾಯಚೂರಿನ ಶಕ್ತಿನಗರದ ಕೆಪಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯವಿಲ್ಲದ ಕಾರಣ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂತೂರ್ ಗೋಲ್ಡ್ ಫೆಮಿನಾ ಸ್ಟೈಲಿಸ್ಟಾ ಸೌತ್ 2018ರ 5ನೇ ಆಡಿಶನ್ ಟೈಟಲ್ ಅನ್ನು ಗೆದ್ದ ಶಿಮೋನ್ ನಾಥ್