Select Your Language

Notifications

webdunia
webdunia
webdunia
webdunia

ಆ ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ವರ್ತಿಸಿದ್ದು ಹೇಗೆ? ಶಾಕಿಂಗ್

ಆ ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ವರ್ತಿಸಿದ್ದು ಹೇಗೆ? ಶಾಕಿಂಗ್
ಬೆಳಗಾವಿ , ಸೋಮವಾರ, 3 ಜೂನ್ 2019 (16:02 IST)
ಅಲ್ಲಿನ ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಅಸಭ್ಯ ವರ್ತನೆ ತೋರಿದ್ದಾರೆ.

ಸರ್ಕಾರಿ ಕೆಲಸದ ಮೇಲೆ ಬ್ಯಾಂಕ್ ಗೆ ತೆರಳಿದ್ದ  ಗ್ರಾಹಕನ ಮೇಲೆ ಬ್ಯಾಂಕ್ ಸಿಬ್ಬಂದಿ ಅವಾಜ್ ಹಾಕಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರಿನ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಸಿಬ್ಬಂದಿಯಿಂದ ಅಸಭ್ಯ ವರ್ತನೆ ತೋರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಗ್ರಾಹಕ ಸುನಿಲ್ ನರಗುಂದ ಜೊತೆ ಬ್ಯಾಂಕ್ ಸಿಬ್ಬಂದಿ ಅಸಭ್ಯ ವರ್ತನೆ ತೋರಿದ್ದಾರೆ ಎಂದು ದೂರಿದ್ದಾರೆ.

ಮಾಸಿಕ ವೇತನದ ಚೆಕ್ ಸಂದಾಯ ಮಾಡಲು ಬ್ಯಾಂಕ್ ಗೆ ತೆರಳಿದ್ದ  ಗ್ರಾಹಕ ಸುನಿಲ್ ಗೆ, ಮೊದಲು 10 ನಿಮಿಷಗಳ ಕಾಲ ಕಾಯಿಸಿದ್ದಾರೆ ಬ್ಯಾಂಕ್  ಸಿಬ್ಬಂದಿ.

ಕೆಲಸ ಮಾಡ್ತಿವಿ ಮಾಡ್ತಿವಿ ಅಂತ ಹೇಳಿ ನಂತರ ಮತ್ತೆ ಅರ್ಧ ಗಂಟೆಯ ಕಾಲ ಕಾಯಿಸಿದ್ದಾರೆ ಸಿಬ್ಬಂದಿ. ಚೆಕ್ ರಿಸೀವ್ ಮಾಡಿ ಕೊಡಲು ಎರಡು ನಿಮಿಷದ ಕೆಲಸಕ್ಕೆ ಅರ್ಧ ಗಂಟೆ ಕಾಯಿಸಿ ಮತ್ತೆ ಊಟ ಮಾಡಿ ಬಂದು ನಿನ್ನ ಚೆಕ್ ತೆಗೆದುಕೊಳ್ಳುತ್ತೇನೆ ಎಂದು ಕಾಲಹರಣ ಮಾಡಿದ್ದಾರೆ ಬ್ಯಾಂಕ್ ಸಿಬ್ಬಂದಿ.

ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಅಸಭ್ಯ ವರ್ತನೆ ಕುರಿತು  ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾದ ಗ್ರಾಹಕ ಸುನಿಲ್ ಗೆ ಸಿಬ್ಬಂದಿ ಅವಾಜ್ ಹಾಕಿದ್ದಾರೆ. ಈ ಕಿತ್ತಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸದ ಸಿಬ್ಬಂದಿ ವಿರುದ್ಧ ಕಿತ್ತೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತ ಶಾಸಕ ಸುಧಾಕರ್ ಯೂ ಟರ್ನ್ ಹೊಡೆದದ್ಯಾಕೆ?