Select Your Language

Notifications

webdunia
webdunia
webdunia
webdunia

ಭಾರಿ ಮಳೆಯಿಂದ ತುಮಕೂರಿನ ಮನೆಗಳು ಜಲಾವೃತ

Houses in Tumkur flooded due to heavy rain
tumakuru , ಸೋಮವಾರ, 5 ಸೆಪ್ಟಂಬರ್ 2022 (20:18 IST)
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸೇತುವೆಗಳು ಭಾರೀ ಹಾನಿಯಾಗಿದ್ದು,  ಕೆಲವೆಡೆ ಮನೆಗಳು ಜಲಾವೃತಗೊಂಡಿವೆ.ವರುಣನ ರುದ್ರನರ್ತನಿಂದ ವಿವಿಧ ಊರುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳೇ ಕಾಣದಂತಾಗಿವೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಲಂಕೆನಹಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ಮಳೆ ನೀರಿಗೆ ಕೊಚ್ಚಿ ಹೋಗಿದೆ.ರಾತ್ರಿ ಸುರಿದ ಮಳೆಯಿಂದಾಗಿ ಕೋಡಿ ಬಿದ್ದ ಮಾವತ್ತೂರು ಕೆರೆಯಿಂದ ಗರುದಾಚಲ ನದಿ ಉಕ್ಕಿ ಹರಿಯುತ್ತಿದೆ.ಗರುಡಾಚಲ ನದಿಗೆ ಅಡ್ಡಲಾಗಿ ಕಟ್ಟಿರುವ ವಿವಿಧ ಸೇತುವೆಗಳು ಮುಳುಗಿವೆ.ಉಕ್ಕಿಹರಿಯುತ್ತಿರುವ ನದಿಯನ್ನು ನೋಡಲು ವಿವಿಧ ಗ್ರಾಮದ ಗ್ರಾಮಸ್ಥರು ನದಿತಟದಲ್ಲಿ  ಜಮಾವಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮಳೆಯಿಂದ ಮುಳುಗಡೆ ಆಯ್ತು ರಾಜಧಾನಿ