Publish Date: Tue, 02 Oct 2018 (16:13 IST)
Updated Date: Tue, 02 Oct 2018 (16:16 IST)
ಅಲ್ಲಿ ಮದ್ಯ ವ್ಯಸನ ತ್ಯಜಿಸಿದವರನ್ನು ಸಾಧಕರೆಂದು ಗೌರವಿಸಲಾಯಿತು. ಮದ್ಯ ಪಾನ ಬಿಡುವಂತೆ ವಿಭಿನ್ನವಾಗಿ ಜಾಗೃತಿ ಮೂಡಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಾವೇರಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ದಿನಾಚರಣೆ ಪ್ರಯುಕ್ತ ವಿಭಿನ್ನ ಕಾರ್ಯಕ್ರಮ ನಡೆಯಿತು. ಮದ್ಯ ವ್ಯಸನದ ಬಗ್ಗೆ ಕುರಿತು ಪಾನ ಮುಕ್ತ ಕಾರ್ಯಕ್ರಮವನ್ನು ಆಚರಿಸಿದರು.
ಹಾವೇರಿ ನಗರದ ಸಿದ್ದಪ್ಪ ಸರ್ಕಲ್ ನಲ್ಲಿ ಮದ್ಯ ವ್ಯಸನವನ್ನು ತ್ಯಜಿಸಿದವರಿಗೆ ಸಾಧಕರೆಂದು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಪರುಶರಾಮ ಭಾಗವಹಿಸಿದ್ದರು. ಇನ್ನೂ ಮದ್ಯಪಾನದಿಂದ ದೇಶವನ್ನು ಉಳಿಸಿ ಎನ್ನುವ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಲಾಯಿತು.