Publish Date: Wed, 31 Mar 2021 (12:38 IST)
Updated Date: Wed, 31 Mar 2021 (12:40 IST)
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಮೇಟಿ ಕೇಸ್ ನಲ್ಲಿ ಎಫ್ ಐಆರ್ ಹಾಕಿರಲಿಲ್ಲ. ತನಿಖೆ ನಡೆಸದೇ ಮೇಟಿಗೆ ಕ್ಲೀನ್ ಚಿಟ್ ನೀಡಲಾಗಿದೆ. ನಾವು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ನಾವು ಯಾರ ಪರವೂ ಇಲ್ಲ. ವಿರುದ್ಧವೂ ಇಲ್ಲ ಎಂದು ಹೇಳಿದ್ದಾರೆ.
ಜಾರಕಿಹೊಳಿ ಬಂಧನದ ಬಗ್ಗೆ ಎಸ್ ಐಟಿ ನಿರ್ಧರಿಸಲಿದೆ. ತನಿಖೆಯಲ್ಲಿ ನಾನು ಮಧ್ಯೆ ಪ್ರವೇಶ ಮಾಡಲ್ಲ. ಎಸ್ ಐಟಿ ಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ಎಸ್ ಐಟಿ ಕಾನೂನು ಬದ್ಧವಾಗಿ ತನಿಖೆ ನಡೆಸಲಿದೆ. ಎಸ್ ಐಟಿ ಸಮರ್ಥವಾಗಿ ತನ್ನ ಕಾರ್ಯ ಮಾಡ್ತಿದೆ ಎಂದು ಅವರು ತಿಳಿಸಿದ್ದಾರೆ.