Publish Date: Wed, 31 Mar 2021 (12:21 IST)
Updated Date: Wed, 31 Mar 2021 (12:23 IST)
ಬೆಂಗಳೂರು : ಕಾಂಗ್ರೆಸ್ ನವರು ಸತ್ಯಹರಿಶ್ಚಂದ್ರರು ಎಂದು ಹೇಳುವುದು ಬಿಡಲಿ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಸಿದ್ದು ಸವದಿ ವಾಗ್ದಾಳಿ ನಡೆಸಿದ್ದಾರೆ.
ಪಿತೂರಿ ಮಾಡಿ ಕಾಂಗ್ರೆಸ್ ನವರು ಯುವತಿಯನ್ನು ಇರಿಸಿಕೊಂಡಿದ್ದಾರೆ. ಎಸ್ ಐಟಿ ಗೂ ಸಿಗದಂತೆ ಇಟ್ಟುಕೊಂಡ್ರೆ ಹುಡುಕುವುದಕ್ಕೆ ಆಗುತ್ತಾ? ಡಿಕೆಶಿ ಮನೆಯಲ್ಲಿ ಇದ್ದೆ ಎಂದು ಯುವತಿಯೇ ಹೇಳಿದ್ದಾಳೆ. ಯುವತಿಯನ್ನು ಯಾರಿಗೂ ಸಿಗದೇ ಹಾಗೇ ರಕ್ಷಣೆ ಮಾಡಿದ್ದಾರೆ. ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಸಿದ್ದು ಸವದಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹನಿಟ್ರಾಪ್ ಮಾಡುವ ಟೀಮ್ ಇದೆ. ರಾಜಕಾರಣಿಗಳ ವಿಕ್ನೇಸ್ ನೋಡಿ ಹನಿಟ್ರಾಪ್ ಮಾಡುತ್ತಾರೆ. ಹನಿಟ್ರಾಪ್ ಮಾಡಿ ಬ್ಲ್ಯಾಕ್ ಮೇಲ್ ಮಾಡ್ತಾರೆ. ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.