ಬೆಂಗಳೂರು: ರಾಜ್ಯ ವಿಧಾನಸಭೆ ಕಲಾಪದಲ್ಲಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಬಗ್ಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್ಎಂ ರೇವಣ್ಣ 5,6 ಕೋಟಿ ಕೊಟ್ಟರೆ ತಪ್ಪೇನು ಎಂದಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಜನರು ನಿಮ್ಮ ಹಣವನ್ನೇ ಕೊಡಿ, ನಮ್ಮ ತೆರಿಗೆ ಹಣ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರಿಗೆ ಬೇರೆ ಏನೂ ವಿಷಯ ಇಲ್ಲ. ಭಾವನಾತ್ಮಕ ವಿಷಯವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಜನರ ಬದುಕನ್ನು ನೋಡುತ್ತೇವೆ. ನಮ್ಮ ಎಲ್ಲಾ ಯೋಜನೆಗಳೂ ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಮಾಡುತ್ತೇವೆ.
ಇದೇ ಕಾರಣಕ್ಕೆ ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಸಮಿತಿ ಮಾಡಿ ಅವರಿಗೆ ಸ್ವಲ್ಪ ಸವಲತ್ತು ಕೊಟ್ಟಿದೆ. ಅದೇನೂ ದೊಡ್ಡ ವಿಷಯ ಅಲ್ಲ. 50,000 ಕೋಟಿ ಖರ್ಚು ಆಗುವ ಕಡೆಗೆ 5,6 ಕೋಟಿ ಇದಕ್ಕಾಗಿ ಖರ್ಚು ಮಾಡುವುದು ತಪ್ಪಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು ಕೊಡಬೇಕೆಂದರೆ ನಿಮ್ಮ ಹಣದಲ್ಲೇ ಕೊಡಿ. ನಮ್ಮ ತೆರಿಗೆ ಹಣದಲ್ಲಿ ಯಾಕೆ ಕೊಡುತ್ತೀರಿ? ಬರೀ 5,6 ಕೋಟಿ ಎಂದು ಎಷ್ಟು ಸುಲಭವಾಗಿ ಹೇಳುತ್ತೀರಿ, ಅದೇನು ಸಣ್ಣ ಮೊತ್ತವಾ ಎಂದು ಪ್ರಶ್ನೆ ಮಾಡಿದ್ದಾರೆ.