ಬೆಂಗಳೂರು: ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಇಂದು ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿದ್ದು ಇದಕ್ಕೆ ಉತ್ತರವಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀವು ಆರ್ ಎಸ್ಎಸ್ ನವರಿಗೆ ಸಂಬಳ ಕೊಡ್ತಿಲ್ವಾ ಎಂದು ತಿರುಗೇಟು ನೀಡಿದ್ದಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮತ್ತು ಸಮಿತಿ ಸದಸ್ಯರಿಗೆ ಸರ್ಕಾರೀ ಸವಲುತ್ತು ವಿರೋಧಿಸಿ ಬಿಜೆಪಿ ಇಂದು ಸದನದಲ್ಲಿ ತೀವ್ರ ಪ್ರತಿಭಟನೆ ನಡೆಸಿತು. ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಸದನದ ಬಾವಿಗಿಳಿದು ಆಕ್ರೋಶ ಹೊರಹಾಕಿತು.
ಇದು ಕಾಂಗ್ರೆಸ್ ನ ಮತ್ತೊಂದು ಲೂಟಿ ಗ್ಯಾರಂಟಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಶಾಸಕರ ವಿರುದ್ಧ ಆಡಳಿತ ಪಕ್ಷದ ಸದಸ್ಯರೂ ಮುಗಿಬಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಕಾಗದ ಪತ್ರವೊಂದನ್ನು ತೋರಿಸಿ ನೋಡಿ ಆರ್ ಎಸ್ಎಸ್ ಸಂಘದವರಿಗೂ ಕೊಡ್ತಿದ್ದಾರೆ. ಮಹಾರಾಷ್ಟ್ರಮಂತ್ರಿಗಳಿಗೆ ಆರ್ ಎಸ್ಎಸ್ ನವರು ಪಿಎಗಳು, ಸರ್ಕಾರಿ ವೇತನ ನೀಡಲಾಗುತ್ತಿದೆ ಎಂದು ಖರ್ಗೆ ತಿರುಗೇಟು ನೀಡಿದ್ದಾರೆ. ಈ ವೇಳೆ ಬಿಜೆಪಿ ಕೆರಳಿದ್ದು ತೀವ್ರ ಆಕ್ರೋಶ ಹೊರಹಾಕಿದೆ. ಇಂದಿನ ಕಲಾಪದಲ್ಲಿ ಇದೇ ವಿಚಾರ ಭಾರೀ ಸದ್ದು ಮಾಡುತ್ತಿದೆ.