ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ಬಜೆಟ್ 2025 ರನ್ನು ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಸಿಎಂ ಎಷ್ಟು ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ ಎಂಬ ವಿವರ ಇಲ್ಲಿದೆ ನೋಡಿ.
ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿರುವ 16 ನೇ ಬಜೆಟ್ ಇದಾಗಿದೆ. ಈ ಬಜೆಟ್ 4 ಲಕ್ಷ ಕೋಟಿ ಕೋಟಿಯದ್ದಾಗಲಿದೆ ಎನ್ನಲಾಗಿದೆ. ಕಳೆದ ಬಾರಿ ಸಿದ್ದರಾಮಯ್ಯ 3.71 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದರು. ಈ ಬಾರಿ ಅದಕ್ಕಿಂತಲೂ ದೊಡ್ಡ ಮೊತ್ತದ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.
ಮೂಲಸೌಕರ್ಯಾಭಿವೃದ್ಧಿ, ಗ್ಯಾರಂಟಿಗಳಿಗೆ ಅನುದಾನ ಮೀಸಲು, ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಸೇರಿದಂತೆ ಹಲವು ಸವಾಲುಗಳು ಸಿಎಂ ಸಿದ್ದರಾಮಯ್ಯ ಮುಂದಿದೆ. ಇದೆಲ್ಲವನ್ನೂ ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಜೊತೆಗೆ ಹೊಸ ಯೋಜನೆಗಳ ಬಗ್ಗೆಯೂ ಜನರು ಕುತೂಹಲದಿಂದ ಎದಿರು ನೋಡುತ್ತಿದ್ದಾರೆ.
ಇಂದು ರಾಹುಕಾಲಕ್ಕೆ ಮುನ್ನ 10.15 ಕ್ಕೆ ಮುನ್ನ ಬಜೆಟ್ ಮಂಡನೆಯಾಗಲಿದೆ. ಇಂದಿನ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಮೊಣಕಾಲಿನ ಸಮಸ್ಯೆಯಿಂದಾಗಿ ಕುಳಿತು ಬಜೆಟ್ ಮಂಡನೆ ಮಾಡಲಿದ್ದಾರೆ. ಉಳಿದಂತೆ ಎಷ್ಟು ಹೊತ್ತು ಬಜೆಟ್ ಭಾಷಣವಿರಲಿದೆ ಎಂದು ತಿಳಿದುಬಂದಿಲ್ಲ.