ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಜಾಮ್ .ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರ ಪರದಾಟ ಹೇಳತಿರದಾಗಿದೆ. ಟ್ರಾಫಿಕ್ ಜಾಮ್‌ನಿಂದ ಕಂಗೆಟ್ಟ ಜನತೆ ಸರ್ಕಾರದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದಾರೆ.
ವಾಹನ ಸವಾರರ ಒಂದು ದಿನದ ಸಂಬಳ ಕಟ್ ಆದ್ರೆ ಸರ್ಕಾರ ಕೊಡುತ್ತಾ.?ಯಾರೋ ಒಬ್ಬರು ಬರೋದಕ್ಕೆ ಸಾರ್ವಜನಿಕರಿಗೆ ತೊಂದರೆ ಕೊಡೊದು ಎಷ್ಟು ಸರಿ.ಇದು ಡೆಮಾಕ್ರಟಿಕ್ ದೇಶನಾ ? ಇಲ್ಲ ಡಿಕ್ಟೆಟರ್ ಆಡಳಿತನಾ ? ಎಂದು ವಾಹನಸವಾರರು ಆಕ್ರೋಶ ವ್ಯಕ್ತಪಡಿಸಿದ್ದು,ಬಹುತೇಕ ಕಡೆ ಟ್ರಾಫಿಕ್ ಜಾಮ್ ನಿಂದ ಕೆಲಸಕ್ಕೆ ತೆರಳುವ ವಾಹನನ ಸವಾರರ ಪರದಾಡುವಂತಾಗಿದೆ.ನಗರದ ಹಲವೆಡೆ ರಸ್ತೆ ಬಂದ್ ,ವಾಹನ ಸವಾರರಿಗಂತೂ ಫುಲ್ ಟೆನ್ಷನ್ ಆಗಿದೆ.ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್,ಕೆ.ಆರ್ ಸರ್ಕಲ್ ಹಾಗೂ ನಗರದ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿ ಗಂಟೆಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿ ಸರ್ಕಾರ ಹಿಡಿಶಾಪ ಹಾಕುತ್ತಿದ್ದಾರೆ.