Publish Date: Fri, 11 Nov 2022 (11:09 IST)
Updated Date: Fri, 11 Nov 2022 (10:45 IST)
ಬೆಂಗಳೂರು : ಎಲೆಕ್ಷನ್ ಸನಿಹದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.
ಸರ್ಕಾರಿ ನೌಕರರ ಬಹಳ ದಿನಗಳಿಂದ ಎದಿರು ನೋಡುತ್ತಿದ್ದ ಏಳನೇ ವೇತನ ಆಯೋಗದ ರಚನೆ ಮಾಡಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಆಯೋಗದ ಸಮಿತಿ ರಚಿಸಲಾಗಿದೆ.
ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿವಿಗಳ ಸಿಬ್ಬಂದಿ ಮತ್ತು 4 ಲಕ್ಷ ನಿವೃತ್ತ ನೌಕರರಿಗೆ ಅನುಕೂಲ ಆಗಲಿದೆ.