Webdunia - Bharat's app for daily news and videos

Install App

ಹಿಜಾಬ್ ಗಲಾಟೆಯಲ್ಲಿ ಹಿಂದುಗಳ ಮೇಲೆ ಪರಿಣಾಮ

Webdunia
ಗುರುವಾರ, 17 ಫೆಬ್ರವರಿ 2022 (15:29 IST)
ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಪೋಷಕರು ಹಿಂದೂ ಧರ್ಮದ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಡಾ.ಎಲ್.ಕೆ.ಸುವರ್ಣ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಬಾಹ್ಯ ಒತ್ತಡಗಳಿಂದ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಪೋಷಕರು ಹಿಜಾಬ್ ನೆಪದಲ್ಲಿ ಧಾರ್ಮಿಕ ಸಂಘರ್ಷ ಉಂಟುಮಾಡುತ್ತಿದ್ದಾರೆ.
 
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಇವರು ತೀರ್ಪು ಬರುವವರೆಗೂ ಕಾಯುವಷ್ಟು ವ್ಯವಧಾನವಿಲ್ಲದೆ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಹಿಂದಿರುವ ಶಕ್ತಿಗಳನ್ನು ಕೂಡಲೆ ಸರ್ಕಾರ ಕಂಡುಹಿಡಿದು ಮಟ್ಟ ಹಾಕಬೇಕೆಂದು ಮನವಿ ಮಾಡಿದರು.
 
ಇದರ ಭಾಗವಾಗಿ ಬೆಂಗಳೂರು ಸೆಂಚುರಿಯನ್ ಕ್ಲಬ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ತಿಲಕವಿಟ್ಟು ಕರ್ತವ್ಯಕ್ಕೆ ಹಾಜರಾದ ಎಂಬ ಕಾರಣಕ್ಕೆ ಮೆಮೋ ನೀಡಿ, ಒಂದು ದಿನದ ಸಂಬಳ ಕಡಿತಗೊಳಿಸಿ ನೋಟಿಸ್ ಜಾರಿ ಮಾಡಿ ಹಿಂದುತ್ವ ವಿರೋ ಕೆಲಸ ಮಾಡಿದ್ದಾರೆ.
 
ಇದಕ್ಕೆ ಕಾರಣರಾದ ಕ್ಲಬ್ ಕಾರ್ಯದರ್ಶಿ ಈ.ಜಿ ಜೈದೀಪ್ ಅವರನ್ನು ಕೂಡಲೇ ವಜಾÁ ಮಾಡಬೇಕೆಂದು ರಾಜ್ಯ ಸಹಕಾರಿ ಸಚಿವರಲ್ಲಿ ಮನವಿ ಮಾಡುತ್ತಿದ್ದೇವೆ. ಈ ರೀತಿ ತಮ್ಮ ಸ್ವಾರ್ಥಕ್ಕೆ ಹಿಂದೂ ಧರ್ಮದ ಆಚಾರಕ್ಕೆ ಧಕ್ಕೆ ತರುವ ಸಂಸ್ಥೆಯ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದೂ ಮಹಾಸಭಾ ಹಾಗೂ ಇತರೆ ಹಿಂದೂಪರ ಸಂಘಟನೆಗಳು ಈ ಸೆಂಚುರಿಯನ್ ಕ್ಲಬ್ ಮುಂದೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
 
ಇನ್ನೊಂದು ಪ್ರಕರಣದಲ್ಲಿ ಒತ್ತಡಕ್ಕೆ ಮಣಿದು ಶಿಕ್ಷಣ ಆಡಳಿತ ಮಂಡಳಿ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಘಟನೆ ಕೂಡ ಒಂದು. ಶಿಕ್ಷಕಿಯನ್ನು ಗುರಿಯಾಗಿಸಿ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಕೆಲಸದಿಂದ ತೆಗೆಸುವಂತೆ ಮಾಡಿದರು. ಕೂಡಲೇ ಶಿಕ್ಷಕಿಯ ನೆರವಿಗಾಗಿ ರಾಜ್ಯ ಸರ್ಕಾರ ನಿಲ್ಲಬೇಕು ಎಂದರು.
 
ಇದೇ ತಿಂಗಳು 20ರಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅವೇಶನ ಕನ್ಯಾಕುಮಾರಿಯ ನಾಗರಕೋಯಿಲ್ ನಲ್ಲಿ ಜರುಗಲಿದೆ. ಸಭೆಯಲ್ಲಿ ದೇಶದ ಹಿಂದುತ್ವಕ್ಕೆ ಆಗುತ್ತಿರುವ ಅನ್ಯಾಯ ದೌರ್ಜನ್ಯಗಳ ವಿಚಾರವಾಗಿ ಚರ್ಚೆ ನಡೆಯಲಿದೆ. ಮುಂದಿನ ಹೋರಾಟಗಳ ಬಗ್ಗೆ ರೂಪುರೇಷೆಗಳು ತಯಾರಾಗಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೋಹನ್‍ಗೌಡ, ದಿನಕರ್ ರಾವ್, ಕುಲಕರ್ಣಿ, ಮಮತಾ, ಸೂರ್ಯ ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments