Publish Date: Mon, 20 Jul 2020 (15:34 IST)
Updated Date: Mon, 20 Jul 2020 (15:36 IST)
ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಕೂತಿದ್ದ ಬೆಂಗಳೂರಿಗರಿಗೆ ಮಧ್ಯಾಹ್ನದ ಗಾಳಿ ಸಮೇತ ಮಳೆ ತಂಪೆರೆದಿದ್ದಾನೆ.
ಇಂದು ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಹಲವೆಡೆ ಭಾರೀ ಗಾಳಿ ಸಮೇತ ಮಳೆಯಾಗಿದೆ. ಇದರಿಂದಾಗಿ ಕೆಲವೆಡೆ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ವರುಣನ ಅಬ್ಬರ ನಡೆಯುತ್ತಿದೆ.