Select Your Language

Notifications

webdunia
webdunia
webdunia
webdunia

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

ರೋಡ್ ರೀಲ್ಸ್

Sampriya

ಬೆಂಗಳೂರು , ಶುಕ್ರವಾರ, 18 ಏಪ್ರಿಲ್ 2025 (21:29 IST)
Photo Credit X
ಬೆಂಗಳೂರು: ಎಸ್‌ಜೆಪಿ ಮಧ್ಯ ರಸ್ತೆಯಲ್ಲಿ ಚೇರ್ ಮೇಲೆ ಕುಳಿತು ಕಾಲು ಹಾಕಿಕೊಂಡು ಟೀ ಕುಡಿದು ರೀಲ್ಸ್ ಮಾಡಿದ್ದ ಯುವಕ ಇದೀಗ ಕಾನೂನು ಎದುರಿಸಬೇಕಿದೆ. ಆತನ ವಿರುದ್ಧ ಎಸ್.ಜೆ. ಪಾರ್ಕ್ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ.

ನಂದಿನಿ ಲೇಔಟ್ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಬಂಧಿತ. ಎಸ್‌ಜೆಪಿ ರಸ್ತೆಯಲ್ಲಿ ಟೆಂಪೋ ಚಾಲಕನಾಗಿದ್ದು, ರೀಲ್ಸ್ ಮಾಡಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಸಾರ್ವಜನಿಕರಿಗೆ ತೊಂದರೆ ಕೊಟ್ಟ ಹಿನ್ನೆಲೆಯಲ್ಲಿ ಆತನ ಮೇಲೆ ಎಐಆರ್ ದಾಖಲಿಸಿ ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಎಸ್‌ಜೆಪಿ ರಸ್ತೆಯ ನಡುವೆ ಚೇರ್ ಮೇಲೆ ಕುಳಿತು ಕಾಲು ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್ ಮಾಡಿದ್ದ. ಈ ವಿಡಿಯೋ ಭಾರೀ ವೈರಲ್ ಆಯಿತು. ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಬಸಪ್ಪ ಶಿರಗುಪ್ಪಿ ಗಮನಿಸಿ ದೂರು ಸಲ್ಲಿಸಿದ್ದಾರೆ.

ರಸ್ತೆ ನಡುವೆ ಚೇರ್ ಮೇಲೆ ಕುಳಿತು ರೀಲ್ಸ್ ಮಾಡುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜತೆಗೆ ವಿಡಿಯೋವನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಯುವ ಜನರಿಗೆ ತಪ್ಪು ಪ್ರೇರಣೆ ನೀಡುವ ಸಾಧ್ಯತೆ ಇರುತ್ತದೆ. ಆರೋಪಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ