Publish Date: Wed, 07 Aug 2019 (16:52 IST)
Updated Date: Wed, 07 Aug 2019 (16:54 IST)
ನಿಖಿಲ್ ಎಲ್ಲಿದ್ದೀಯಪ್ಪಾ ಅಂತ ಕೇಳ್ತಿದ್ದೀರಿ. ಈಗ ಯಡಿಯೂರಪ್ಪ ಎಲ್ಲಿದ್ದೀಯಪ್ಪಾ ಅಂತ ಕರೆಯಬೇಕಾಗಿದೆ. ಹೀಗಂತ ಹಾಲಿ ಸಿಎಂಗೆ ಮಾಜಿ ಸಿಎಂ ಟಾಂಗ್ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಎಲ್ಲಿದ್ದೀರಪ್ಪ ಯಡಿಯೂರಪ್ಪನವರೇ? ಅಂತ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಎಲ್ಲಿದ್ದೀಯಪ್ಪಾ ಅಂತ ಈ ಹಿಂದೆ ಕೇಳಿದವರು ಈಗ ಎಲ್ಲಿಗೆ ಹೋಗಿದ್ದಾರೆ ಎಂದು ಟೀಕೆ ಮಾಡಿದ್ರು.
ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇ ಎಂದ ಅವರು, ರಾಜ್ಯದ ಜನರ ಹಿತ ಮರೆತು, ಪ್ರವಾಹ ಪರಿಸ್ಥಿತಿ ಕಡೆಗಣಿಸಿ ಯಡಿಯೂರಪ್ಪ ಹೋಗಿದ್ದಾರೆ ಎಂದು ದೂರಿದ್ರು.