Select Your Language

Notifications

webdunia
webdunia
webdunia
webdunia

ಸಿದ್ದಾರ್ಥ್‌ ಮೃತಪಟ್ಟ ಹಿನ್ನಲೆ; ಪ್ರತಿಭಟನೆಗೆ ಮುಂದಾದ ದೋಸ್ತಿಗಳು

ಸಿದ್ದಾರ್ಥ್‌ ಮೃತಪಟ್ಟ ಹಿನ್ನಲೆ; ಪ್ರತಿಭಟನೆಗೆ ಮುಂದಾದ ದೋಸ್ತಿಗಳು
ಬೆಂಗಳೂರು , ಬುಧವಾರ, 31 ಜುಲೈ 2019 (12:17 IST)
ಬೆಂಗಳೂರು : ಬೆಂಗಳೂರು : ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ದಾರ್ಥ್‌ ಅವರು ಮೃತಪಟ್ಟ ಹಿನ್ನಲೆ ಐಟಿ ಅಧಿಕಾರಿಗಳ ಕಿರಿಕುಳವೇ ಕಾರಣ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.



ಈ ಹಿನ್ನಲೆಯಲ್ಲಿ ವಿಧಾನಸಭೆಯಲ್ಲಿ ರಾಜ್ಯ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆಗೆ ನಿರ್ಧಾರ ಮಾಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಐಟಿ ಡಿಜಿ ಬಾಲಕೃಷ್ಣ ಅವರ ಕಿರುಕುಳದಿಂದ ಸಿದ್ಧಾರ್ಥ್ ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣನ್ ವಿರುದ್ಧ ತನಿಖೆಗೆ ಮಾಡಬೇಕೆಂದು ಒತ್ತಾಯಿಸಿ ದೋಸ್ತಿಗಳು ಪ್ರತಿಭಟನೆ ನಡೆಸಲಿದ್ದಾರೆ ಎನ್ನಲಾಗಿದೆ.

 

ಅಲ್ಲದೇ ಐಟಿ ಅಧಿಕಾರಿಗಳ ಕಿರಿಕುಳದಿಂದ ಸಿದ್ಧಾರ್ಥ್ ಮೃತಪಟ್ಟಿದ್ದಾರೆ. ಈ ಬಗ್ಗೆ ಚರ್ಚೆ ಆಗಲೇಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆಯ ಸ್ಪೀಕರ್ ಆಗಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ