Publish Date: Sat, 27 Jul 2019 (17:40 IST)
Updated Date: Sat, 27 Jul 2019 (17:42 IST)
ಮೈತ್ರಿ ಸರಕಾರ ಕೊನೆಯಾದರೂ ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಯಾರು ಬಂದರೂ ಹೋದರೂ ಜೆಡಿಎಸ್ ಪಕ್ಷವನ್ನು ಮುಗಿಸೋಕೆ ಆಗೋಲ್ಲ.
ಹೀಗಂತ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ತೋರಿಸೋಕೆ ಆಗಿಲ್ಲ. ಇದರಿಂದಾಗಿ ಮೈತ್ರಿ ಸರಕಾರ ಪತನಗೊಂಡಿದೆ. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾಗ ತೊಂದರೆ ಅನುಭವಿಸಿದ್ದಾರೆ ಎಂದ್ರು.
ಇದೇ ವೇಳೆ, ರಾಜರಾಜೇಶ್ವರಿ ನಗರ ಹಾಗೂ ಕೆ.ಆರ್.ಪುರಂ ಕ್ಷೇತ್ರಗಳ ಪ್ರಮುಖರ ಸಭೆ ನಡೆಸಿದ ದೇವೇಗೌಡರು, ಅತೃಪ್ತ ಶಾಸಕರ ಮತಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಗೆ ಸಿದ್ಧತೆ ನಡೆಸುವಂತೆ ಸೂಚಿಸಿದ್ರು.