Publish Date: Tue, 09 Jul 2019 (11:15 IST)
Updated Date: Tue, 09 Jul 2019 (11:17 IST)
ಬೆಂಗಳೂರು: ಒಂದೆಡೆ ಶಾಸಕರ ಸಾಮೂಹಿಕ ರಾಜೀನಾಮೆಯಿಂದ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದರೆ ಇನ್ನೊಂದೆಡೆ ಜೆಡಿಎಸ್ ನಾಯಕ, ಸಚಿವ ಎಚ್ ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ.
ಯಾವುದೇ ಸಂಕಷ್ಟಗಳು ಎದುರಾದಾಗ ದೇವೇಗೌಡರ ಕುಟುಂಬ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಪುನಸ್ಕಾರ ನಡೆಸುತ್ತದೆ. ಅದೇ ರೀತಿ ಈಗ ಸಮ್ಮಿಶ್ರ ಸರ್ಕಾರ ಉಳಿವು-ಅಳಿವಿನ ಪ್ರಶ್ನೆ ಎದುರಾಗಿರುವ ಸಂದರ್ಭದಲ್ಲಿ ರೇವಣ್ಣ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.