Publish Date: Mon, 08 Jul 2019 (09:54 IST)
Updated Date: Mon, 08 Jul 2019 (09:56 IST)
ಬೆಂಗಳೂರು : ಶಾಸಕರು ರಾಜೀನಾಮೆಯಿಂದ ಮೈತ್ರಿ ಸರ್ಕಾರದಲ್ಲಿ ಕೋಲಾಹಲ ಸೃಷ್ಟಿಯಾದರೂ ಕೂಡ ಸರ್ಕಾರ ಬಿದ್ದರೂ ಪರವಾಗಿಲ್ಲ. ರಾಜೀನಾಮೆ ನೀಡಿದ ಜೆಡಿಎಸ್ ಶಾಸಕರ ಮನವೊಲಿಸಬೇಡಿ ಎಂದು ಇತರ ಶಾಸಕರಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಜೆಡಿಎಸ್ ಶಾಸಕರಿಗೆ ಖಡಕ್ ವಾರ್ನ್ ಮಾಡಿದ್ದರೂ ಕೂಡ ಜೆಡಿಎಸ್ ಸಾಸಕರು ರಾಜೀನಾಮೆ ಕೊಟ್ಟ ಹಿನ್ನಲೆಯಲ್ಲಿ ಶಾಸಕರ ವಿರುದ್ಧ ಸಿಎಂ ಸಿಎಂ ಗರಂ ಆಗಿದ್ದಾರೆ. ಭಾನುವಾರ ತಾಜ್‍ವೆ ಸ್ಟ್ ಎಂಡ್ ನಲ್ಲಿ ನಡೆದ ಶಾಸಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ನಂಬಿಕೆ ದ್ರೋಹ ಮಾಡಿ ಹೋದವರನ್ನು ಮನವೊಲಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.