Select Your Language

Notifications

webdunia
webdunia
webdunia
webdunia

ರಾಜ್ಯಸಭೆ ಟಿಕೆಟ್ ಕೈ ತಪ್ಪಿದ ಬಳಿಕ ಮೋದಿ ಬಗ್ಗೆ ದೇವೇಗೌಡ ಹೇಳಿಕೆಗೆ ಎದುರಾಳಿಗಳು ಶಾಕ್

HD Devegowda
ಬೆಂಗಳೂರು: ರಾಜ್ಯಸಭೆ ಟಿಕೆಟ್ ಕೈತಪ್ಪಿದ  ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆಗೆ ಎದುರಾಳಿಗಳೇ ಶಾಕ್ ಆಗಿದ್ದಾರೆ.

ರಾಜ್ಯಸಭೆಗೆ ಬಿಜೆಪಿ ಇತ್ತೀಚೆಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ ಈ ಪಟ್ಟಿಯಲ್ಲಿ ದೋಸ್ತಿ ಪಕ್ಷ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಹೆಸರಿರಲಿಲ್ಲ. ಈ ಕುರಿತಾಗಿ ಕಾಂಗ್ರೆಸ್ ಟೀಕೆ ಮಾಡಿತ್ತು.  ಹಿರಿಯ ನಾಯಕನನ್ನು ಬಿಜೆಪಿ ಕಡೆಗಣಿಸಿದೆ ಎಂದು ಟೀಕೆ ಮಾಡಿತ್ತು.

ಇಂದು ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು ಟೀಕೆಗಳಿಗೆಲ್ಲಾ ಉತ್ತರ ನೀಡಿದ್ದಾರೆ. ‘ಒಂದು ರಾಜ್ಯಸಭೆ ಟಿಕೆಟ್ ನಿಂದ ನನ್ನ ಮೋದಿ ಸಂಬಂಧ ನಿರ್ಧಾರವಾಗಲ್ಲ. ನನ್ನ ಅವರ ಸಮಬಂಧ ನನ್ನ ಅಂತಿಮ ಕಾಲದವರೆಗೂ ಇರುತ್ತದೆ. ಎನ್ ಡಿಎ ಜೊತೆ ನಾವು ಮೈತ್ರಿ ಮುಂದುವರಿಸುತ್ತೇವೆ. ನನಗೆ ರಾಜ್ಯಸಭೆಯಲ್ಲಿ ಮುಂದುವರಿಯಬೇಕು ಎಂದಿದ್ದರೆ ನಾನೇ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದೆ. ಆದರೆ ನಾನು ಯಾವತ್ತೂ ಟಿಕೆಟ್ ಗಾಗಿ ಬೇಡಿಕೆಯಿಟ್ಟಿಲ್ಲ.

ವಿದೇಶದಲ್ಲೂ ಮೋದಿಗೆ ತುಂಬಾ ಗೌರವವಿದೆ. ಆ ರೀತಿ ವಿದೇಶದಲ್ಲೂ ಬೆಳೆದ ವ್ಯಕ್ತಿ ಬೇರೆ ಯಾರೂ ಇಲ್ಲ. ನನಗೆ ಮೋದಿ ಜೊತೆ ವೈಯಕ್ತಿಕವಾದ ಸಂಬಂಧವಿದೆ. ರಾಜ್ಯಸಭೆ ಸದಸ್ಯನಾಗದೇ ಇದ್ದರೂ ರಾಜ್ಯದ ಸಮಸ್ಯೆಯಿದ್ದರೆ ಪತ್ರ ಬರೆಯುತ್ತೇನೆ ಇಲ್ಲವೇ ಭೇಟಿ ಮಾಡುತ್ತೇನೆ. ನನ್ನ ಕೊನೆಯವರೆಗೂ ಈ ಸಂಬಂಧ ಹೀಗೇ ಇರುತ್ತದೆ’ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನದ ರೇಸ್ ನಲ್ಲಿರುವ ಯುವ ಶಾಸಕರು ಇವರೇ