Daily Horoscope

Select Your Language

Notifications

webdunia
webdunia
webdunia
webdunia

ನೆಹರೂ ದಾಖಲೆ ಮುರಿದ ಮೋದಿಗೆ ಸಂಪುಟ ಸಹೋದ್ಯೋಗಿಗಳಿಂದ ಎದ್ದು ನಿಂತು ಗೌರವ Video

Modi
ನವದೆಹಲಿ: ಸುದೀರ್ಘ ಅವಧಿಯ ಚುನಾಯಿತ ಪ್ರಧಾನಿ ಎಂಬ ಜವಹರಲಾಲ್ ನೆಹರೂ ದಾಖಲೆ ಮುರಿದ ಪ್ರಧಾನಿ ಮೋದಿಗೆ ಸಂಪುಟ ಸಹೋದ್ಯೋಗಿಗಳು ಇಂದು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ್ದಾರೆ.
 

ಎನ್ ಡಿಎ ಸರ್ಕಾರ ಮೂರನೇ ಅವಧಿಯ 2 ನೇ ವರ್ಷದಲ್ಲಿ ಪ್ರಧಾನಿ ಮೋದಿ ಈ ದಾಖಲೆ ಮಾಡಿದ್ದಾರೆ. ಚುನಾಯಿತ ಪ್ರಧಾನಿಯಾಗಿ ಮೋದಿ 4399 ಪೂರ್ತಿ ಮಾಡಿದ್ದಾರೆ. ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಚುನಾಯಿತ ಪ್ರಧಾನಿಯಾಗಿ 4398 ದಿನಗಳನ್ನು ಪೂರ್ತಿ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಇಂದು ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಬರುತ್ತಿದ್ದಂತೇ ಇತರೆ ಸಚಿವರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ್ದಾರೆ. ಗೃಹ ಸಚಿವ ಅಮಿತ್ ಶಾರಿಂದ ಹಿಡಿದು ಎಲ್ಲಾ ಸಚಿವರೂ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಪ್ರಧಾನಿಯಾಗುವುದಕ್ಕಿಂತ ಮೊದಲು ಗುಜರಾತ್ ಸಿಎಂ ಆಗಿದ್ದ ಪ್ರಧಾನಿ ಮೋದಿ ಇದೀಗ ಒಟ್ಟು 24 ವರ್ಷ ಆಡಳಿತ ನಡೆಸಿದ್ದಾರೆ. ಸಿಎಂ ಮತ್ತು ಪಿಎಂ ಆಗಿ ಮೋದಿ ಒಟ್ಟು 6 ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.
  

Share this Story:

Follow Webdunia kannada

ಮುಂದಿನ ಸುದ್ದಿ

ತಪಾಸಣೆ ನೆಪದಲ್ಲಿ ಚಲಿಸುತ್ತಿರುವ ಬೈಕ್ ತಳ್ಳಿದ ಟ್ರಾಫಿಕ್ ಪೊಲೀಸ್: ಇದ್ಯಾವ ನ್ಯಾಯ ಎಂದು ಜನರ ಆಕ್ರೋಶ Video