Select Your Language

Notifications

webdunia
webdunia
webdunia
webdunia

ಹಂಪಿಯಲ್ಲಿ ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ಮಾಡಿದ ಆರೋಪಿಗಳು ಅರೆಸ್ಟ್

Hampi

Krishnaveni K

ಹಂಪಿ , ಶನಿವಾರ, 8 ಮಾರ್ಚ್ 2025 (16:51 IST)
ಹಂಪಿ: ಪ್ರವಾಸಕ್ಕೆಂದು ಬಂದಿದ್ದ ಇಸ್ರೇಲ್ ಮಹಿಳೆ ಮತ್ತು ಹೋಂ ಸ್ಟೇ ನಿರ್ವಾಹಕಿ ಮೇಲೆ ಗ್ಯಾಂಗ್ ರೇಪ್ ಮಾಡಿ ಓರ್ವನ ಸಾವಿಗೆ ಕಾರಣವಾದ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.

ಆರೋಪಿಗಳು ಇಬ್ಬರು ಗಂಗಾವತಿ ತಾಲೂಕಿನ ಸಾಯಿನಗರ ನಿವಾಸಿಗಳು ಎಂದು ತಿಳಿದುಬಂದಿದೆ. 22 ವರ್ಷದ ಮಲ್ಲೇಶ್ ಮತ್ತು 21 ವರ್ಷದ ಚೇತನ್ ಸಾಯಿ ಬಂಧಿತರು. ಈ ಇಬ್ಬರೂ ದುರುಳರ ಜೊತೆ ಶಾಮೀಲಾಗಿದ್ದ ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ.

ಮಾರ್ಚ್ 6 ರಂದು ರಾತ್ರಿ ಘಟನೆ ನಡೆದಿತ್ತು. ಪೆಟ್ರೋಲ್ ಬಂಕ್ ಎಲ್ಲಿದೆ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು 100 ರೂ.ಗಾಗಿ ಬೇಡಿಕೆಯಿಟ್ಟಿದ್ದರು. ಕೊಡದೇ ಇದ್ದಾಗ ಹೋಂ ಸ್ಟೇ ನಿರ್ವಾಹಕಿ ಮೇಲೆ ಹಲ್ಲೆ ನಡೆಸಿದ್ದರು. ರಕ್ಷಣೆಗೆ ಬಂದ ಮೂವರು ಪುರುಷ ಪ್ರವಾಸಿಗರನ್ನು ನಾಲೆಗೆ ತಳ್ಳಿದ್ದರು. ಬಳಿಕ ಪ್ರವಾಸಕ್ಕೆ ಬಂದಿದ್ದ ಇಸ್ರೇಲಿ ಮಹಿಳೆ ಮತ್ತು ಹೋಂ ಸ್ಟೇ ನಿರ್ವಾಹಕಿ ಮೇಲೆ ಅತ್ಯಾಚಾರವೆಸಗಿದ್ದರು.

ನಾಲೆಗೆ ಬಿದ್ದಿದ್ದ ಪುರುಷ ಪ್ರವಾಸಿಗರ ಪೈಕಿ ಓರ್ವ ಮೃತಪಟ್ಟಿದ್ದಾನೆ. ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

₹2500ರ ಮಹಿಳಾ ಸಮೃದ್ಧಿ ಯೋಜನೆಗೆ ಶೀಘ್ರದಲ್ಲೇ ನೋಂದಣಿ ಪ್ರಾರಂಭ: ಸಿಎಂ ರೇಖಾ ಗುಪ್ತಾ