Select Your Language

Notifications

webdunia
webdunia
webdunia
webdunia

ಶವವನ್ನು ಪೀಸ್‌ ಪೀಸ್ ಮಾಡಿ ನದಿಗೆ ಎಸೆಯಲು ಯತ್ನ: ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ತಾಯಿ, ಮಗಳು

Ahiritola Hooghly River, Crime News,  human organs in suitcases,

Sampriya

ಉತ್ತರ ಕೋಲ್ಕತ್ತಾ , ಮಂಗಳವಾರ, 25 ಫೆಬ್ರವರಿ 2025 (17:58 IST)
Photo Courtesy X
ಉತ್ತರ ಕೋಲ್ಕತ್ತಾ: ಇಬ್ಬರು ಮಹಿಳೆಯರು ಅಹಿರಿಟೊಲಾ ಪ್ರದೇಶದಲ್ಲಿ  ಶವವಿದ್ದ ಟ್ರಾಲಿ ಬ್ಯಾಗ್‌ ಅನ್ನು ಹೂಗ್ಲಿ ನದಿಗೆ ಎಸೆಯಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಘಟನೆ ಇಂದು ನಡೆದಿದೆ.

ಮುಂಜಾನೆಯೇ ಕುಮಾರತುಲಿ ಘಾಟ್ ಬಳಿ ಇಬ್ಬರು ಮಹಿಳೆಯರು ಭಾರವಾದ ಟ್ರಾಲಿ ಬ್ಯಾಗ್ ಅನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡ ಸ್ಥಳೀಯರಿಗೆ ಅನುಮಾನ ಮೂಡಿದೆ.  ಅವರನ್ನು ಪ್ರಶ್ನಿಸಿ, ಟ್ರಾಲಿ ಬ್ಯಾಗ್ ತೆರೆದು ನೋಡಿದಾಗ ಅದರೊಳಗೆ ತಲೆ ಇಲ್ಲದ ಶವ ಪತ್ತೆಯಾಗಿದೆ.

ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ಹೇಳಿದರು: "ಮಹಿಳೆಯರು ಟ್ಯಾಕ್ಸಿಯಲ್ಲಿ ಬರುವುದನ್ನು ನಾವು ನೋಡಿದ್ದೇವೆ ಮತ್ತು ಅವರು ಭಾರವಾದ ಟ್ರಾಲಿ ಬ್ಯಾಗ್ ಅನ್ನು ತಮ್ಮೊಂದಿಗೆ ಸಾಗಿಸುತ್ತಿದ್ದರು."

ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು: "ಆರಂಭದಲ್ಲಿ, ಅವರು ತಮ್ಮ ಸಾಕು ನಾಯಿಯ ದೇಹವನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ." ನಂತರ ಬ್ಯಾಗ್ ತೆರೆದು ನೋಡಿದಾಗ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಮೃತದೇಹ ಪತ್ತೆಯಾಗಿದೆ" ಎಂದು ಅವರು ಹೇಳಿದರು.

ಇಬ್ಬರು ಮಹಿಳೆಯರ ಗುರುತು ಇನ್ನೂ ತಿಳಿದುಬಂದಿಲ್ಲ. ಮಹಿಳೆಯರು ತಮ್ಮನ್ನು ತಾಯಿ ಮತ್ತು ಮಗಳು ಎಂದು ಗುರುತಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವರ ಜತೆಗೆ ಸೆಲ್ಫಿಗೆ ಫೋಸ್ ಕೊಟ್ಟ ಶಶಿ ತರೂರ್‌, ಚರ್ಚೆ ಹುಟ್ಟು ಹಾಕಿದ ಕೈ ನಾಯಕನ ನಡೆ