ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಬಗ್ಗೆ ಒಂದೊಂದೇ ಶಾಕಿಂಗ್ ವಿಚಾರಗಳು ಬಯಲಾಗುತ್ತಿದೆ. ಐಪಿಎಲ್ ಅಧಿಕಾರಿ, ಡಿಜಿಪಿ ಕೆ ರಾಮಚಂದ್ರ ರಾವ್ ಅವರ ಮಗಳಾಗಿ ರನ್ಯಾ ಚಿನ್ನ ಕಳ್ಳ ಸಾಗಣಿಕೆ ದಂಧೆಗೆ ಬಿದ್ದಿದ್ದೇ ಅಚ್ಚರಿ. ಪ್ರತೀ ಬಾರಿ ದುಬೈಗೆ ಹೋದರೆ ಆಕೆಗೆ 12 ಲಕ್ಷ ಕಮಾಯಿ ಸಿಗುತ್ತಿತ್ತು ಎಂಬ ಶಾಕಿಂಗ್ ವಿಚಾರ ಬಯಲಾಗಿದೆ.
ರನ್ಯಾ ಕೇವಲ ನಟಿ ಮಾತ್ರವಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಒಬ್ಬ ಪೊಲೀಸ್ ಅಧಿಕಾರಿ ಮಗಳು. ಆದರೆ ಆಕೆಯನ್ನೇ ಕಳ್ಳಸಾಗಣೆ ಮಾಡಲು ಬಳಸಿದ್ದರ ಹಿಂದೆಯೂ ಉದ್ದೇಶವಿದೆ. ಪೊಲೀಸ್ ಅಧಿಕಾರಿ ಮಗಳು, ನಟಿ ಬೇರೆ ಯಾರಿಗೂ ಗೊತ್ತಾಗಲ್ಲ ಎನ್ನುವುದು ಪಾಪಿಗಳ ಉದ್ದೇಶವಾಗಿತ್ತು.
ಆಕೆ ಒಂದು ಬಾರಿ ದುಬೈಗೆ ಹೋಗಿ ಚಿನ್ನ ಅಕ್ರಮ ಸಾಗಣಿಕೆ ಮಾಡಿದರೆ 12 ಲಕ್ಷ ರೂ. ಸಂಭಾವನೆ ಸಿಗುತ್ತಿತ್ತಂತೆ. ತೊಡೆಯಲ್ಲಿ ಸೊಂಟದ ಬೆಲ್ಟ್ ನಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಅನುಮಾನ ಬಾರದಂತೆ ಚಿನ್ನ ಸಾಗಿಸುತ್ತಿದ್ದಳು ಎಂಬ ಅಂಶ ಬಯಲಾಗಿದೆ.
ಒಂದು ಕೆ.ಜಿ. ಚಿನ್ನ ಸಾಗಾಟಕ್ಕೆ ಆಕೆಗೆ 4 ರಿಂದ 5 ಲಕ್ಷ ರೂ. ಕಮಿಷನ್ ನೀಡಲಾಗುತ್ತಿತ್ತು. ರನ್ಯಾ ಕೇವಲ ದಾಳವಷ್ಟೇ. ಇದರ ಅಸಲಿ ಕಿಂಗ್ ಪಿನ್ ಗಳು ಬೇರೆಯೇ ಇದ್ದಾರೆ ಎಂದು ತಿಳಿದುಬಂದಿದೆ. ಅವರಿಗಾಗಿ ಈಗ ಹುಡುಕಾಟ ನಡೆದಿದೆ.
ರನ್ಯಾ ಚಿನ್ನ ತಂದು ಯಾರಿಗೆ ಕೊಡುತ್ತಿದ್ದಳು, ಈ ಅಕ್ರಮದಲ್ಲಿ ಏರ್ ಪೋರ್ಟ್ ಅಧಿಕಾರಿಗಳೂ ಭಾಗಿಯಾಗಿದ್ದಾರಾ ಎಂಬಿತ್ಯಾದಿ ವಿಚಾರವಾಗಿ ಈಗ ತನಿಖೆ ನಡೆಯುತ್ತಿದೆ. ಇನ್ನು, ಡಿಜಿಪಿ ರಾಮಚಂದ್ರರಾವ್ ಮಲಮಗಳು ರನ್ಯಾ. ಮಗಳ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ರಾಮಚಂದ್ರರಾವ್, ಮಗಳ ಕೆಲಸದ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ. ಆಕೆ ಹಲವು ದಿನಗಳಿಂದ ನಮ್ಮ ಸಂಪಕರ್ದಲ್ಲಿ ಇಲ್ಲ. ಕೆಲವು ತಿಂಗಳ ಹಿಂದೆ ಮದುವೆಯಾಗಿತ್ತು. ಗಂಡನ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾಳೆ ಎಂದಿದ್ದಾರೆ.