ಡಿಕೆ ಶಿವಕುಮಾರ್ ಕಟ್ಟಿರೋ ಮನೆಗೆ ಬಂದು ಸೇರಿಕೊಂಡವ್ನು ಸಿದ್ದರಾಮಯ್ಯ: ಥೂ ಥೂ ಎಂದ ವಿಶ್ವನಾಥ್

Krishnaveni K
ಬುಧವಾರ, 2 ಏಪ್ರಿಲ್ 2025 (12:47 IST)
ಮೈಸೂರು: ರಾಜ್ಯ ಕಾಂಗ್ರೆಸ್ ನಾಯಕತ್ವ ಕಚ್ಚಾಟದ ಬಗ್ಗೆ ಇಂದು ಮಾಜಿ ಸಚಿವ ಎಚ್ ವಿಶ್ವನಾಥ್ ಮಾತನಾಡಿದ್ದು, ಡಿಕೆ ಶಿವಕುಮಾರ್ ಕಟ್ಟಿರುವ ಮನೆಗೆ ಬಂದು ಸೇರಿಕೊಂಡವನು ಸಿದ್ದರಾಮಯ್ಯ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಶ್ವನಾಥ್, ರಾಜ್ಯ ರಾಜಕಾರಣದ ಬಗ್ಗೆ ವಿಶ್ಲೇಷಣೆ ನಡೆಸಿದ್ದಾರೆ. ‘ವಿಧಾನಸಭೆ ಈಗ ಸಿನಿಮಾದಲ್ಲಿ ನೀಡುವ ಎ ಸರ್ಟಿಫಿಕೇಟ್ ಗೆ ಬಂದು ನಿಂತಿದೆ. ಮೊದಲು ಯು ಅಂದರೆ ಯೂನಿವರ್ಸಲ್ ಇತ್ತು. ಸದನದಲ್ಲಿ ಎಂಥಾ ಮಾತುಗಳು ಬರ್ತಾ ಇವೆ, ನೀವೇ ತೋರಿಸ್ತೀವಿ, ಥೂ.. ಥೂ.. ಜನ ಕ್ಯಾಕರಿಸಿ ಉಗೀತಾವ್ರೆ ನಿಮಗೆ’ ಎಂದಿದ್ದಾರೆ.

ಇನ್ನು ನಾಯಕತ್ವದ ಬದಲಾವಣೆ ಬಗ್ಗೆಯೂ ಅವರು ಮಾತನಾಡಿದ್ದು ಡಿಕೆ ಶಿವಕುಮಾರ್ ಪರವಾಗಿ ಮಾತನಾಡಿದ್ದಾರೆ. ‘ಕಾಂಗ್ರೆಸ್ ಕಟ್ಟಿರೋನು ಅವನೊಬ್ಬನೇ ಡಿಕೆ ಶಿವಕುಮಾರ್. ಕಾಂಗ್ರೆಸ್ ಕಟ್ಟಿರೋನು ಕಣ್ರೀ ಅವನು. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಕಟ್ಟಿರುವವರು. ನೀವು ಏನು ಮಾಡಿದ್ರು? ಡಿಕೆ ಶಿವಕುಮಾರ್ ಕಟ್ಟಿದ ಮನೆಗೆ ಬಂದು ಸೇರಿಕೊಂಡವನು ಸಿದ್ದರಾಮಯ್ಯ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಕೆ ಶಿವಕುಮಾರ್ ಗೆ ಅವಕಾಶ ಮಾಡಿಕೊಡುವ ಬಗ್ಗೆ ಮಾತನಾಡಿದ ಅವರು ‘ಸರ್ಕಾರ ರಚನೆಗೆ ಡಿಕೆಶಿ ಶ್ರಮ, ಕೊಡುಗೆ ಇಲ್ವಾ? 130 ಸೀಟು ಬಂದಿರುವುದರಲ್ಲಿ ಡಿಕೆಶಿ ಕೊಡುಗೆ ಇಲ್ವಾ?’ ಎಂದು ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments