Publish Date: Sun, 29 Sep 2019 (17:53 IST)
Updated Date: Sun, 29 Sep 2019 (17:55 IST)
ಅನರ್ಹ ಶಾಸಕ ಹೆಚ್.ವಿಶ್ವನಾಥ್, ಹುಣಸೂರು ಮತಕ್ಷೇತ್ರದಿಂದ ನಾನೇ ಸ್ಪರ್ಧೆ ಮಾಡೋದಾಗಿ ಸ್ಪಷ್ಟವಾಗಿ ಹೇಳೋ ಮೂಲಕ ಜಿಟಿಟಿ ಕುಟುಂಬದ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದಾರೆ.
ಹೆಚ್.ವಿಶ್ವನಾಥ್ ಅವರ ಈ ಹೇಳಿಕೆಯಿಂದಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡ ರಿಗೆ ತೀವ್ರವಾದಂತಹ ನಿರಾಸೆ ಉಂಟಾಗಿದೆ ಎನ್ನಲಾಗಿದೆ.
ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ತಮ್ಮ ಮಗನನ್ನು ನಿಲ್ಲಿಸಲು ಜಿಡಿಟಿ ಮುಂದಾಗಿದ್ದರು. ಹೀಗಾಗಿ ಪದೇ ಪದೇ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಬಂದಿದ್ರು.
ಆದರೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸ್ಪಷ್ಟನೆ ನೀಡಿದ ಬಳಿಕ ಜಿಟಿಡಿ ಆಸೆ ಠುಸ್ಸ್ ಆಗಿದೆ ಎಂದೇ ಚರ್ಚೆ ಆಗುತ್ತಿದೆ.