Publish Date: Mon, 19 Nov 2018 (16:47 IST)
Updated Date: Mon, 19 Nov 2018 (16:53 IST)
ರೈತರಿಂದ ವಿಧಾನಸೌಧ ಮುತ್ತಿಗೆ ಹಿನ್ನೆಲೆಯಲ್ಲಿ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಿಂದಲೂ ರೈತರು ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ರೈತರು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ರೈತರು ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.
ಚನ್ನಪಟ್ಟಣ ನಗರದ ಗಾಂಧಿ ಭವನದಿಂದ ರಾಜ್ಯ ರಾಜಧಾನಿಗೆ ಚಲೋ ನಡೆಸಲಾಗುತ್ತಿದೆ. ಗಾಂಧಿ ಭವನದ ಬಳಿ ಜಮಾವಣೆಯಾದ ರೈತ ಮುಖಂಡರು ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.