Select Your Language

Notifications

webdunia
webdunia
webdunia
webdunia

ರೈತ ಮಹಿಳೆ ಬಗ್ಗೆ ಕ್ಷಮೆ ಕೇಳದ ಸಿಎಂ ಕುಮಾರಸ್ವಾಮಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರ ಯತ್ನ

ರೈತ ಮಹಿಳೆ ಬಗ್ಗೆ ಕ್ಷಮೆ ಕೇಳದ ಸಿಎಂ ಕುಮಾರಸ್ವಾಮಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರ ಯತ್ನ
ಬೆಂಗಳೂರು , ಸೋಮವಾರ, 19 ನವೆಂಬರ್ 2018 (12:08 IST)
ಬೆಂಗಳೂರು: ಕಬ್ಬಿಗೆ ಬೆಂಬಲ  ಬೆಲೆ, ಸಾಲಮನ್ನಾಕ್ಕೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದಿರುವ ಸಾವಿರಾರು ರೈತರನ್ನು ಸಮಾಧಾನಪಡಿಸಲು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಚಿವ ಕೆಜೆ ಜಾರ್ಜ್ ಗೆ ಸಲಹೆ ನೀಡಿದ್ದಾರೆ.

ಇನ್ನೊಂದೆಡೆ ರೈತ ಮಹಿಳೆ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ಮಹಿಳೆ ಬಗ್ಗೆ ಇದುವರೆಗೆ ಕ್ಷಮೆ ಕೇಳಿಲ್ಲ. ಆದರೆ ಆಗಿರುವ ಘಟನೆಗಳ ಬಗ್ಗೆ ವಿಷಾಧವಿದೆ. ಈ ಬಗ್ಗೆ ಕೂಡಲೇ ಸಭೆ ಕರೆಯುತ್ತೇನೆ ಎಂದು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿದ್ದಾರೆ. 

ಈಗಾಗಲೇ ಫ್ರೀಡಂ ಪಾರ್ಕ್ ಗೆ ಬಂದು ತಲುಪಿರುವ ರೈತರು ವಿಧಾನ ಸೌಧಕ್ಕೆ ಮುತ್ತಿಗೆ ಹಾಕದಂತೆ ಪೊಲೀಸರು ತಡೆ ಹಿಡಿದಿದ್ದಾರೆ. ಆದರೆ ಭುಗಿಲೆದ್ದಿರುವ ರೈತರ ಆಕ್ರೋಶ ತಣ್ಣಗಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಕೂಡಲೇ ರೈತ ನಾಯಕರನ್ನು ಕರೆಸಿ ಸಭೆ ನಡೆಸಿ. ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ರೈತರ ಬಗ್ಗೆ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ ಹೋರಾಟದ ಕಿಚ್ಚನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನೀವೇನು ಫಸ್ಟ್ ಟೈಮ್ ಸಿಎಂ ಆದ್ರಾ? ಘೋಷಣೆ ಮಾಡುವಾಗ ಯೋಚನೆ ಇರಲಿಲ್ವಾ? ಸಿಎಂ ಕುಮಾರಸ್ವಾಮಿಗೆ ಪ್ರಶ್ನೆ