Publish Date: Mon, 19 Nov 2018 (08:39 IST)
Updated Date: Mon, 19 Nov 2018 (08:40 IST)
ಬೆಂಗಳೂರು: ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆ ನಡುವೆ ಮಹಿಳೆಯೊಬ್ಬರು ತಮ್ಮ ವಿರುದ್ಧ ಟೀಕಿಸಿದ್ದಕ್ಕೆ ನಾಲ್ಕು ವರ್ಷ ಎಲ್ಲಿ ಮಲಗಿದ್ದೆಯಮ್ಮ. ಈಗ್ಯಾಕೆ ಪ್ರತಿಭಟನೆ ಮಾಡ್ತಿದ್ದೀಯಾ ಎಂದು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ನಿನ್ನೆ ಬೆಂಗಳೂರಿನ ಕೃಷಿ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಹಸಿರು ಶಾಲು ಹೊದ್ದ ಮಹಿಳೆಯೊಬ್ಬಳು ನಾನು ಮುಖ್ಯಮಂತ್ರಿಯಾಗಲು ನಾಲಾಯಕ್ ಎಂದು ಪ್ರತಿಭಟನೆ ನಡೆಸಿದ್ದಾಳೆ. ಈಕೆ ಇದುವರೆಗೆ ಹೊಲಕ್ಕೆ ಹೋಗಿದ್ದಾಳೋ ಇಲ್ಲವೋ ಗೊತ್ತಿಲ್ಲ. ನಾಲ್ಕು ವರ್ಷದ ಹಿಂದೆ ಹಣ ಕೊಟ್ಟ ಕಾರ್ಖಾನೆ ಮಾಲಿಕರಿಗೆ ಓಟು ಕೊಟ್ಟು ಈಗ ಕುಮಾರಸ್ವಾಮಿ ಹಣ ಕೊಡಿಸಿಲ್ಲ ಎಂದು ಬೀದಿಗೆ ಬಂದಿದ್ದೀಯಲ್ಲಾ? ಅಷ್ಟು ಸಮಯ ಎಲ್ಲಿ ಮಲಗಿದ್ದೆ ಎಂದು ಕಿಡಿ ಕಾರಿದ್ದರು.
ಸಿಎಂ ಈ ಹೇಳಿಕೆ ವಿರುದ್ಧ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಅವಕಾಶವಾದಿ ಸಿಎಂ ನಾಗರಿಕರನ್ನು ಯಾವತ್ತೂ ಗೌರವಿಸಲ್ಲ ಮತ್ತು ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎಂದೇ ಗೊತ್ತಿಲ್ಲ. ಇದು ಕ್ಷಮೆಗೂ ಮೀರಿದ ತಪ್ಪು ಎಂದು ಕಿಡಿ ಕಾರಿದೆ.
ಅಷ್ಟೇ ಅಲ್ಲದೆ, ಸಿಎಂ ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದವರು ಗೂಂಡಾಗಳು, ರೈತರಲ್ಲ. ರೈತರು ಯಾವತ್ತೂ ಸುವರ್ಣ ಸೌಧಕ್ಕೆ ಲಾರಿ ನುಗ್ಗಿಸುವಂತಹ ಹೇಯ ಕೃತ್ಯ ನಡೆಸುತ್ತಿರಲಿಲ್ಲ ಎಂದಿದ್ದರು. ಈ ಹೇಳಿಕೆ ಕೂಡಾ ಈಗ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.