Publish Date: Mon, 19 Nov 2018 (08:27 IST)
Updated Date: Mon, 19 Nov 2018 (08:29 IST)
ತಿರುವನಂತಪುರಂ: ಶಬರಿಮಲೆಯಲ್ಲಿ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ನೂರಕ್ಕೂ ಹೆಚ್ಚು ಭಕ್ತರ ಗುಂಪು ಪ್ರತಿಭಟನೆಗೆ ಮುಂದಾಗಿದ್ದು, ಕೋರ್ಟ್ ಅರೆಸ್ಟ್ ಮಾಡಲಾಗಿದೆ.
ಇದ್ದಕ್ಕಿದ್ದಂತೆ ರಾತ್ರಿ ವೇಳೆ ದೇವಾಲಯದ ಹೊರಭಾಗದಲ್ಲಿ ಪ್ರತಿಭಟನೆಗೆ ಮುಂದಾದ ಭಕ್ತರು ಪೊಲೀಸರಿಗೂ ತಲೆನೋವಾದರು. ನಾವು ಸ್ವಾಮಿ ಶರಣಂ ಎನ್ನುವಾಗ ನೀವು ನಮ್ಮನ್ನು ಬಂಧಿಸುವಂತಿಲ್ಲ ಎಂದು ಸಾಬೂಬು ಹೇಳಿದರು.
ಇದರಿಂದಾಗಿ ಪೊಲೀಸರೂ ಕೆಲವು ಕಾಲ ಕೈ ಕಟ್ಟಿ ಕೂರುವಂತಾಯಿತು. ಬಳಿಕ ಪ್ರತಿಭಟನೆ ಮಾಡುತ್ತಿದ್ದ ಭಕ್ತರನ್ನು ಕೋರ್ಟ್ ಅರೆಸ್ಟ್ ಮಾಡಿ ಕರೆದೊಯ್ಯಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.