Publish Date: Sun, 18 Nov 2018 (09:35 IST)
Updated Date: Sun, 18 Nov 2018 (09:37 IST)
ಬೆಂಗಳೂರು: ಡಿಸಿಎಂ ಪರಮೇಶ್ವರ್ ಗೆ ಮುಖ್ಯಮಂತ್ರಿಯಾಗುವ ಕನಸು ಹುಟ್ಟಿಕೊಂಡಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಕೊಟ್ಟ ಪರೋಕ್ಷ ಟಾಂಗ್ ಏನು ಗೊತ್ತಾ?
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ್ ಒಂದು ವೇಳೆ ಸಿಎಂ ಪಟ್ಟ ಕೊಟ್ಟರೆ ನಿಭಾಯಿಸಲು ಸಿದ್ಧ ಎನ್ನುವ ಮೂಲಕ ಮುಖ್ಯಮಂತ್ರಿಯಾಗುವ ಕನಸು ಹೇಳಿಕೊಂಡಿದ್ದಾರೆ.
ಇದಕ್ಕೆ ಇನ್ನೊಂದು ಕಡೆ ಮಾಧ್ಯಮಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ ‘ನಾನು ಸಿಎಂ ಆಗಿದ್ದೇ ವಿಚಿತ್ರ ಪರಿಸ್ಥಿತಿಯಲ್ಲಿ. ಮುಖ್ಯಮಂತ್ರಿ ಪಟ್ಟ ಯಾವತ್ತೂ ಶಾಶ್ವತ ಅಲ್ಲ’ ಎಂದು ಟಾಂಗ್ ಕೊಟ್ಟಿದ್ದಾರೆ. ಈ ನಡುವೆ ನ.28 ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುದ್ದಿಯಿದೆ. ಹೀಗಾಗಿ ಸಚಿವಾಕಾಂಕ್ಷಿಗಳ ಅಸಮಾಧಾನ, ಹೈಡ್ರಾಮಾಗಳಿಗೆ ಮತ್ತೆ ರಾಜ್ಯ ರಾಜಕೀಯ ಸಾಕ್ಷಿಯಾಗುವ ಸಾಧ‍್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.